ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಶಿಕಾರಿಪುರದಿಂದ ಆರ್.ಸಿ. ಪರಶುರಾಮ್ ಅವರು ಬರೆಯುತ್ತಾರೆ:  "ಜೂ. 30ರ ಬೈಟುಕಾಫಿಯ ಪುಟ 2ರಲ್ಲಿ ಯಂಡಮೂರಿ ವೀರೇಂದ್ರನಾಥ್‌ರವರ ಸಂದರ್ಶನದ ಮೊದಲ ಪ್ರಶ್ನೆಯಲ್ಲಿ 'ಅವನೇ ಅವಳ ಸೈನ್ಯದಲ್ಲಿನ ಸರಹದ್ದು ಮಾನವ ನಿರ್ಮಿತತ' ಎನ್ನವ ಮಾತು ಎಂದಿದೆ. ಇದು ಅವನೇ ಅವಳ ಸೈನ್ಯದಲ್ಲಿನ ಮಾನವ ನಿರ್ಮಿತ ಸರಹದ್ದು ಎಂದಾಗಬೇಕಿತ್ತೆಂಬುದು ನನ್ನ ಊಹೆ. ಮತ್ತು ಇದರಲ್ಲಿ 3ನೇ ಪ್ರಶ್ನೆಯ ಉತ್ತರದ ಕೊನೆಯಲ್ಲಿ ಕಾಕಿನಾಡದಲ್ಲಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಒಂದು ದಿನದ ವ್ಯಕ್ತಿತ್ವ ವಿಕಸನದ ಪಾಠ ನೀಡಲಾಗುತ್ತಿದೆ ಎಂದಿದೆ. ಇದರಲ್ಲಿ ಒಂದು ದಿನದ ವ್ಯಕ್ತಿತ್ವ ವಿಕಸನ ಪಾಠವು ವಾರದಲ್ಲಿ ಒಂದು ದಿನವೋ ಅಥವಾ ಒಂದು ತಿಂಗಳಿನಲ್ಲಿ ಒಂದು ದಿನವೋ ಎಂಬುದು ತಿಳಿಸಿರುವುದಿಲ್ಲ.
'ಜೂನ್ 2ರ ಬೈಟುಕಾಫಿಯ ಪುಟ 2ರಲ್ಲಿ ಯಂಡಮೂರಿ ವೀರೇಂದ್ರನಾಥ್‌ರವರ 'ಕಣಿವೆಯಿಂದ ಶಿಖರಕ್ಕೆ' ಲೇಖನದಲ್ಲಿನ 2ನೇ ಪ್ಯಾರಾದಲ್ಲಿ ನಿಜಕ್ಕೂ ಮೇಲಕ್ಕೆ ಬರುವುದೆಂದರೆ ಏನು? ಎಂದು ನನ್ನ 2ನೆಯ ಪ್ರಶ್ನೆಗೆ ಹಾಲ್‌ನಲ್ಲಿ ವಿಶಾಲವಾದ ನಿಶ್ಯಬ್ದ (ಪದ ಪ್ರಯೋಗಕ್ಕೆ ಕ್ಷಮೆ ಇರಲಿ) ಆವರಿಸಿಕೊಳ್ಳುತ್ತದೆ ಎಂದಿದೆ. ಇದರಲ್ಲಿ ಲೇಖಕರು ಬ್ರಾಕೆಟ್‌ನಲ್ಲಿ ಪದ ಪ್ರಯೋಗಕ್ಕೆ ಕ್ಷಮೆ ಇರಲಿ ಎಂದು ಕೇಳಿರುವುದಕ್ಕೆ ಏನು ಕಾರಣವೋ ತಿಳಿಯಲಿಲ್ಲ ಮತ್ತು 10ನೇ ಪ್ಯಾರಾದ ಕೊನೆಯಲ್ಲಿ ಉಪವಾಸವಿದ್ದರೆ ಪುಣ್ಯ ಬರುವುದೆಂದು ಯಾರೋ ಹೇಳಿದರೆ ಮನೆಯಲ್ಲಿ ಎಲ್ಲರನ್ನೂ ಹಸಿವಿನಲ್ಲಿಟ್ಟು ಮಲಗಿಸುವುದು- ನಂತಹದ್ದೇ ಎಂದಿದೆ. ಇದರಲ್ಲಿ ನಂತಹದ್ದೇ ಎಂಬುದು ಇಂತಹದ್ದೇ ಎಂದಾಗಬೇಕಿತ್ತು ಹಾಗೂ ಈ ಲೇಖನಕ್ಕೆ ಗೆಲವು ಎಂದರೆ ಏನು? ಎಂಬ ಶೀರ್ಷಿಕೆಯನ್ನು ನೀಡಿದ್ದೀರಿ. ಆದರೆ ಪುಟ 11ರಲ್ಲಿ 2 ಬಾರಿ ಪುಟ 12ರಲ್ಲಿ ಒಂದು ಬಾರಿ ಪುಟ 13ರಲ್ಲಿ 2 ಬಾರಿ ಒಟ್ಟು 4 ಬಾರಿ ಗೆಲುವು ಎಂದು ನೀಡಿದ್ದೀರಿ. ನಿಮ್ಮ ಪತ್ರಿಕೆಯ ಸ್ಟೈಲ್‌ಶೀಟ್ ಪ್ರಕಾರ ಗೆಲವು ಎಂಬುದೇ ಸರಿಯೆಂದು ಹೇಳುತ್ತೀರಿ. ಆದರೆ ಒಂದೇ ಲೇಖನದಲ್ಲಿ ಗೆಲವು ಮತ್ತು ಗೆಲುವು ಎಂಬ ಎರಡೂ ಪದಗಳನ್ನು ನೀಡಿರುವುದರಿಂದ ಈ ಪದದ ಬಗ್ಗೆ ನಿಮ್ಮಲ್ಲಿಯೇ ದ್ವಂದ್ವ ಇದೆ ಎಂದೆನಿಸುತ್ತಿದೆ.'
'ಜುಲೈ 7ರ ಬೈಟು ಕಾಫಿಯ ಪುಟ 2ರಲ್ಲಿ ಡಾ. ಪಿ.ಸದಾನಂದ ಮಯ್ಯರವರ ಬೆಳ್ಳಿತಟ್ಟೆ ಲೇಖನದಲ್ಲಿನ 3ನೇ ಪ್ಯಾರಾದಲ್ಲಿ ಹೈಪೋಗ್ಲೈಸೆಮಿಯಾಕ್ಕೆ ತುತ್ತಾಗುತ್ತಿದ್ದರೆ ಅಂತಹವರು ರಿಸ್ಕಿ ವಲಂಯದಲ್ಲಿದ್ದಾರೆ ಎಂದೇ ಲೆಕ್ಕ ಎಂದಿದೆ. ಇದರಲ್ಲಿ 'ವಲಂಯದಲ್ಲಿದ್ದಾರೆ' ಎಂಬುದು 'ವಲಯದಲ್ಲಿದ್ದಾರೆ' ಎಂದಾಗಬೇಕಿತ್ತು. ಮತ್ತು ಕೊನೆಯ ಪುಟದಲ್ಲಿ 'ನಿರ್ಧಾಋ ಕೈಗೊಳ್ಳುವಲ್ಲಿ ತಾಕಲಾಟ ಇರುವ್ಟ್ಜು ಹೈಪೋಗ್ಲೈಸೆಮಿಯಾ ಲಕ್ಷಣಗಳೇ' ಎಂದಿದೆ. ಇದರಲ್ಲಿ 'ನಿರ್ಧಾಋ' ಎಂಬುದು 'ನಿರ್ಧಾರ' ಎಂದೂ, ಇವೆಲ್ಲಿವೆ ಎಂಬುದು ಇವೆಲ್ಲ ಎಂದಾಗಬೇಕಿತ್ತು. ಮತ್ತು ಇದೇ ಪುಟದ 'ಕಣಿವೆಯಿಂದ ಶಿಖರಕ್ಕೆ' ಲೇಖನದ ಕೊನೆಯಲ್ಲಿ 'ಇಷ್ಟವಾದ ಪದಾರ್ಥಗಳಿಗೆ ಪದಾರ್ಥಗಳಿಗೆ ಆರ್ಡರ್ ಕೊಡಬಲ್ಲ ಸ್ಥಾಯಿಗೆ ಬರುವುದು ಎಲ್ಲರ ಅಭಿಲಾಷೆಯೇ' ಅಲ್ಲವೇ? ಎಂದಿದೆ. ಈ ವಾಕ್ಯದಲ್ಲಿ ಪದಾರ್ಥಗಳಿಗೆ ಎಂಬ ಪದವನ್ನು ಒಂದು ಬಾರಿ ನೀಡಿದ್ದರೆ ಸಾಕಾಗಿತ್ತು."
ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ಸಂಗಪ್ಪ. ಗಾಣಿಗೇರ ಪತ್ರ ಬರೆದಿದ್ದಾರೆ. ಅವರು ಹೇಳುತ್ತಾರೆ:  "ತಾ. 4.07.14 (ಬೆಳಗಾವಿ ಆವೃತ್ತಿ) ಮುಖಪುಟದಲ್ಲಿ ಕೆಳಗಿನಂತೆ ಮುದ್ರಣ ದೋಷಗಳು ಕಂಡು ಬಂದಿವೆ.
1. ಕಾಶಪ್ಪನವರ ಕುಟುಂಬದ 'ದಾಂದಲೆ' ದಾಖಲೆ ಎಂದಿದೆ. ಅಲ್ಲದೆ ಈ 'ದಾಂದಲೆ' ಶಬ್ದವು ಈ ವರದಿಯಲ್ಲಿ ಬಹಳ ಕಡೆ ಬಂದಿದೆ. ಅದು 'ದಾಂಧಲೆ ಆಗಬೇಕಾಗಿತ್ತು. 2. 'ಧರೆಯ ಬರೆ' ಎಂಬ ವರದಿಯಲ್ಲಿ ಬಾಗಲಕೋಟೆ ಆನೆದಿಣ್ಣೆ ಗ್ರಾಮದಲ್ಲಿ ಎಂಬುದು ಬಾಗಲಕೋಟೆ ಜಿಲ್ಲೆಯ ಆನದಿನ್ನಿ ಗ್ರಾಮ ಎಂದು ಮುದ್ರಿಸಬೇಕಾಗಿತ್ತು."
ಒಂದು ಶಬ್ದಕ್ಕೆ ಮೂರ್ನಾಲ್ಕು ರೀತಿಯ ಪದಬಳಕೆಯಿರುವಾಗ ನಮ್ಮ ಪತ್ರಿಕೆ ಅವುಗಳಲ್ಲೊಂದನ್ನು ತನ್ನ ಸ್ಟೈಲ್‌ಶೀಟ್‌ಗೆ ಅಳವಡಿಸಿಕೊಳ್ಳುತ್ತದೆ. ಹೀಗಾಗಿ 'ದಾಂದಲೆ' ಎನ್ನುವ ಪದಬಳಕೆ ಸರಿಯಾಗಿಯೇ ಇದೆ. ಅಂತೆಯೇ ಸಂಗಪ್ಪ ಅವರು ಹೇಳುವಂತೆ 'ದಾಂಧಲೆ'ಯೂ ಸರಿಯೇ.   

-ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್