ಸಂಪಾದಕೀಯ

ಡಿ.ಎಡ್‌ಗೆ ಪದವಿ ಮಾನ್ಯತೆ ನೀಡಿ

ಐ.ಟಿ.ಐ. ಮತ್ತು ಡಿಪ್ಲೊಮ ಓದಿದವರು ಇನ್ನು ಮುಂದೆ ನೇರವಾಗಿ ಬಿಎ, ಬಿಎಸ್ಸಿ, ಬಿಕಾಂ, ಪದವಿ ತರಗತಿಗಳಿಗೆ ಸೇರಿಕೊಳ್ಳಬಹುದೆಂದು ಮೈಸೂರು ವಿಶ್ವವಿದ್ಯಾಲಯ ತಿಳಿಸಿದೆ. ಇದು ಬಹು ಸ್ವಾಗತಾರ್ಹವಾದ ನಿರ್ಧಾರ. ಆದರೆ ಶಿಕ್ಷಕರಾಗುವ ಕನಸು ಹೊತ್ತು ಡಿ.ಎಡ್ ಓದಿದ ರಾಜ್ಯದ ಸುಮಾರು 2 ಲಕ್ಷ ಜನರ ಬದುಕು ಮಾತ್ರ ದುರ್ಗಮವಾಗಿದೆ. ಏಕೆಂದರೆ ಸರ್ಕಾರ ಕಾಲಕ್ಕನುಗುಣವಾಗಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ. ಒಂದು ವೇಳೆ ಭರ್ತಿ ಮಾಡಿದರೂ 2 ಲಕ್ಷ ಜನರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಹೆಚ್ಚೆಂದರೆ ಸರ್ಕಾರ 10 ರಿಂದ 15 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತದೆ. ಹೀಗಿರುವಾಗ ಇನ್ನುಳಿದವರ ಗತಿ ಏನು? ಅದಕ್ಕಾಗಿ ಸರ್ಕಾರ ಡಿ.ಎಡ್‌ಗೆ ಪದವಿ ಮಾನ್ಯತೆ ನೀಡಿದರೆ ಡಿ.ಎಡ್. ಓದಿದವರು ಯುಪಿಎಸ್ಸಿ, ಕೆಪಿಎಸ್ಸಿ, ಬ್ಯಾಂಕ್ ಮತ್ತು ಪಿಎಸ್ಸಿ ಯಂತಹ ಇನ್ನುಳಿದ ಹುದ್ದೆಗಳಿಗೆ ನೇಮಕಾತಿ ಹೊಂದಲು ಅವರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದಾಗಿ ಈಗಾಗಲೇ ಉದ್ಯೋಗವಿಲ್ಲದೇ ಬದುಕಿನಲ್ಲಿ ಜಿಗುಪ್ಸೆ ಹೊಂದಿರುವ ಡಿ.ಎಡ್. ಓದಿದವರಿಗೆ ಉದ್ಯೋಗ ಹುಡುಕಿಕೊಳ್ಳಲು ಸಹಕಾರಿಯಾಗುತ್ತದೆ.
-ಬಿ. ಪ್ರಭು ಅಡವಿಹಾಳ್
ಟೀಕಾ ಪ್ರಹಾರ ಬಿಡಿ
ರಾಜ್ಯದ ವಿವಿಧೆಡೆಯಲ್ಲಿ ಕಾಮುಕರ ಅಟ್ಟಹಾಸದಿಂದ ಮಹಿಳೆಯರು, ಮಕ್ಕಳು ಹಾಗೂ ಪೋಷಕರು ಆತಂಕದ ಸ್ಥಿತಿಯಲ್ಲಿದ್ದರೂ, ಅತ್ಯಾಚಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಶುಕ್ರವಾರವೇ ಸರ್ಕಾರ ಎಚ್ಚರಿಕೆ ನೀಡಿದ್ದರೂ ಶನಿವಾರ ರಾಜ್ಯದಲ್ಲಿ ಮತ್ತೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಆದರೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಮುಖಂಡರು ಪರಸ್ಪರ ಅನವಶ್ಯಕವಾಗಿ ಟೀಕಾ ಪ್ರಹಾರ ಮಾಡುತ್ತಾ ಮಾಧ್ಯಮಗಳಲ್ಲಿ ಭರಪೂರ ರಾರಾಜಿಸುತ್ತಿರುವುದು ದುರಂತವೇ ಸರಿ. ರಾಜ್ಯದ ಜನತೆಗೆ ನಿಮ್ಮ ಪರಸ್ಪರ ಅನವಶ್ಯಕ ಕೆಸರೆರಚಾಟಗಳು ಬೇಕಾಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಮೊದಲು ಕ್ರಮಕೈಗೊಳ್ಳಿ.
-ಜಿಬಿ ಕನ್ನೂರ, ಬಸವನಬಾಗೇವಾಡಿ
ಅನುದಾನಿತ ಪಿಯು ಕಾಲೇಜುಗಳ ಹುದ್ದೆಗಳು ಭರ್ತಿಯಾಗಲಿ
ರಾಜ್ಯದ ಅನುದಾನಿತ ಪಿಯು ಕಾಲೇಜುಗಳಲ್ಲಿ ಅನೇಕ ಬೋಧಕ ಬೋಧಕೇತರ ಹುದ್ದೆಗಳು ಖಾಲಿ ಇವೆ. ಅನುದಾನಿತ ಕಾಲೇಜುಗಳಲ್ಲಿನ ಈ ಹುದ್ದೆಗಳ ಭರ್ತಿಗೆ ಆರ್ಥಿಕ ಮಿತವ್ಯಯದ ಕಾರಣ ಅನುಮತಿ ದೊರೆತಿರುವುದಿಲ್ಲ. ಲಾಗಾಯಿತಿನಿಂದಲೂ ಆಡಳಿತ ಮಂಡಳಿಯವರು ಕೊಡುತ್ತಿರುವ ಅಲ್ಪ ಸಂಬಳದಲ್ಲಿಯೇ ಈ ಸಿಬ್ಬಂದಿ ಜೀವನವನ್ನು ಸಾಗಿಸುತ್ತಿದ್ದಾರೆ. 10-15 ವರ್ಷಗಳಿಂದ ಅತಂತ್ರರಾಗಿ ಅರ್ಧ ಸೇವಾವಧಿಯನ್ನೇ ಮುಗಿಸಿರುವ ಇವರು ತಮ್ಮ ಹುದ್ದೆ ಖಾಯಂಗೊಳ್ಳುವುದೋ ಇಲ್ಲವೋ ಎಂಬ ಚಿಂತೆಯಲ್ಲಿದ್ದಾರೆ. ಇನ್ನು ಕೆಲವು ಕಾಲೇಜುಗಳಲ್ಲಿ ಹುದ್ದೆ ಭರ್ತಿಗೆ ಆರ್ಥಿಕ ಮಿತವ್ಯಯ ಇಲ್ಲದಿರುವ ಕಾರಣ ಬೋಧಕ ಸಿಬ್ಬಂದಿ ಬಿಟ್ಟುಹೋಗುತ್ತಿರುವುದರಿಂದ ಮಕ್ಕಳ ಪಾಠ ಪ್ರವಚನಗಳಿಗೂ ತೊಂದರೆಯಾಗುತ್ತಿದೆ. ಅನುದಾನಿತ ಪದವಿ ಕಾಲೇಜುಗಳ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮಕೈಗೊಂಡಂತೆ ಅನುದಾನಿತ ಪದವಿಪೂರ್ವ ಕಾಲೇಜುಗಳ ಹುದ್ದೆ ಭರ್ತಿಗಾಗಿ ಸೂಕ್ತ ಹೆಜ್ಜೆ ಇಡಲಿ.
-ಪ್ರೊ. ಎ.ಎಲ್.ನಾಗೂರ, ಬಿಜಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ