ಸಂಪಾದಕೀಯ

ಸಂತನಾದ ಡೋಬ್ರಿ

ಆತ ಶತಾಯುಷಿ. 1914 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಈತ ಕಳೆದ 20 ವರ್ಷಗಳಿಂದ ಸೋಫಿಯಾ ನಗರದ ಬೀದಿಗಳಲ್ಲಿ ಭಿಕ್ಷೆ ಬೇಡುವ ಕಾಯಕ ಮಾಡುತ್ತಿದ್ದಾನೆ. ಇದರಿಂದ ಸಂಪಾದಿಸಿದ ಎಲ್ಲ ಹಣವನ್ನೂ ದಾನಧರ್ಮಕ್ಕೆ ಬಳಸುತ್ತಿರುವುದು ವಿಶೇಷ. ಕಳೆದ ಇಪ್ಪತ್ತು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿರುವ ಈತ ಅದನ್ನೆಂದೂ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಿಲ್ಲ. ಭಿಕ್ಷೆ ಹಾಕಿದ ಪ್ರತಿ ಕೈಗೂ ಮುತ್ತನ್ನಿಕ್ಕುವ ಸಂಪ್ರದಾಯವನ್ನಿಟ್ಟುಕೊಂಡಿರುವ ಡೋಬ್ರಿ ಎಲ್ಲವೂ ದೇವರಿಂದ ಕೊಡಲ್ಪಡುತ್ತದೆ ಎಂಬ ನಂಬಿಕೆಯನ್ನಿಟ್ಟುಕೊಂಡಿದ್ದಾನೆ. ತನಗೆ ನೀಡಲಾಗುವ ವಿಶ್ರಾಂತಿವೇತನವನ್ನು ತನ್ನ ಜೀವನಕ್ಕೆ ಉಪಯೋಗಿಸಿ, ಅದರಲ್ಲೂ ಉಳಿಸಿ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾನೆ. ಹೀಗೆ ಮಾಡಲು ಆತನಿಗೆ ಪ್ರೇರಣೆ ನೀಡಿದ್ದು ಎರಡು ಅಂಶಗಳು. ಒಂದು, ತನ್ನ ತಾಯಿಯ ಉತ್ತೇಜನ ಮತ್ತು ಬಲ್ಗೇರಿಯಾದಲ್ಲಿ ಮನೆಮಾಡಿದ್ದ ಬಡತನ ಮತ್ತು ಭ್ರಷ್ಟಾಚಾರ. 2009ರಲ್ಲಿ ಡೋಬ್ರಿಯಿಂದ 35700 ಲೇವಾ ದೇಣಿಗೆ ಪಡೆದ ಬಿಷಪ್ ಟಿಕ್ಹಾನ್ ಹೇಳುವಂತೆ, ಡೋಬ್ರಿಯೊಬ್ಬ ಅಪರೂಪದ ವ್ಯಕ್ತಿತ್ವ ಹೊಂದಿದ ಪವಿತ್ರಾತ್ಮ. ಎರಡನೇ ಮಹಾಯುದ್ಧದ ಸಮಯದಲ್ಲಿ ಬಾಂಬ್ ದಾಳಿಯಾದಾಗ ಅದರ ಶಬ್ದಕ್ಕೆ ತನ್ನ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡ. ಚಳಿಯಿರಲಿ, ಮಳೆಯಿರಲಿ, ತನ್ನ ಕಾಯಕವನ್ನೆಂದೂ ಬಿಡದ ಡೋಬ್ರಿ ಸಂತಾ ಕ್ಲಾಸನಂತೆ ಮಕ್ಕಳಿಗೆಲ್ಲಾ ಪ್ರೀತಿಯ ತಾತನಾಗಿ, ಜನ ಪ್ರೀತಿಯನ್ನು ಗಳಿಸಿದ್ದಾನೆ. ಹೀಗೆ ಇದುವರೆಗೂ ಲಕ್ಷಾಂತರ ಡಾಲರ್ ಹಣವನ್ನು ವಿವಿಧ ಚರ್ಚ್‌ಗಳಿಗೆ ಮತ್ತಿತರ ಸಂಘಸಂಸ್ಥೆಗಳಿಗೆ ನೀಡಿ ತನ್ನ ನೂರನೆಯ ವಯಸ್ಸಿನಲ್ಲಿಯೂ ತನ್ನ ಕಾಯಕ ಮುಂದುವರೆಸಿದ್ದಾನೆ. ದಯೆ ಮತ್ತು ಮಾನವೀಯತೆಯ ಪ್ರತೀಕವಾಗಿ, ವಾಸ್ತವವಾಗಿ ಬಡವನಾದರೂ ಆತ್ಮದಲ್ಲಿ ಶ್ರೀಮಂತಿಕೆಯನ್ನು ತುಂಬಿಕೊಂಡು ಸಹಾಯ ಮಾಡುವ ಇವನ ಸೇವೆಯನ್ನು ಮೆಚ್ಚಿ ಸಂತನ ಸ್ಥಾನವನ್ನು ನೀಡಲಾಗಿದೆ. ಹೀಗೆ ಸಾಮಾನ್ಯ ಭಿಕ್ಷುಕ ಸಂತ ಪದವಿಗೇರಿದ್ದು ನಿಜಕ್ಕೂ ರೋಮಾಂಚನವುಂಟು ಮಾಡುವಂತಹದ್ದು. ಅವನ ಅಭಿಮಾನಿಗಳು ಅವನ ಹೆಸರಿನ ಫೇಸ್‌ಬುಕ್ ಪೇಜ್ ಪ್ರಾರಂಭಿಸಿ ವಿಶ್ವಾದ್ಯಂತ ಅವನು ಲಕ್ಷಾಂತರ ಅಭಿಮಾನಿಗಳನ್ನು ಹೊಂದಲು ನೆರವಾಗಿದ್ದಾರೆ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!