ಸಂಪಾದಕೀಯ

ಬಡವ

    ಬಲ್ಲಿದನ ಸುಖಕ್ಕೆ ತನ್ನ ಸುಖ ಅರ್ಪಿಸುವವ
    ಇವನ ಒಡಲು ಯಾವತ್ತೂ ಡವ ಡವ
    ಕಿಸೆ ಖಾಲಿ ಹಾಗಾಗಿ ಮುಖ ಜೋಲಿ
    ಬಂದ ಕೋಪವನ್ನೆಲ್ಲ ನುಂಗಿ ನುಂಗಿಯೇ ಈತನ ಹೊಟ್ಟೆ ತುಂಬುತ್ತದೆ
    ಬವಣೆಯ ಸಮಾನಾರ್ಥಕ
    ಒಪ್ಪೊತ್ತಿಗೆ ಊಟವಿಲ್ಲದಿದ್ದರೂ ಅರಸೊತ್ತಿಗೆಯ ಕನಸು ಕಾಣುವವ
    ಹಸಿವಿಗೆ ಈತನೇ ತುತ್ತು, ಈತನ ತುತ್ತಿಗೆ ಮಾತ್ರ ಯಾವತ್ತೂ ಕುತ್ತು
    ಈತನ ಬಡತನ ಒಂದಿಷ್ಟು ಜನರ ಸಿರಿತನಕ್ಕೆ ಕಾರಣ
    ಈತ ಕುಚೇಲ, ವಸ್ತ್ರವಷ್ಟೇ ಅಲ್ಲ, ಚೀಲಕ್ಕೂ ಸಾವಿರ ತೂತು
    ಹಣವಿಲ್ಲದಿದ್ದರೇನು, ಈತ ಮನಸ್ಸಿನ ಕಣಕಣದಲ್ಲೂ ಶ್ರೀಮಂತನೇ
    ಈತನ ಕೋಪ ದವಡೆಗೆ ಮೂಲ, ಆಕ್ರೋಶ ಹಲ್ಲಿಗೇ ಮೂಲ
    ಗಂಜಿ ಉಂಡರೂ ನಂಜು ಬೀರದವ
    ಗುಡಿಸಲಿನಲ್ಲಿದ್ದರೇನು ಮಾಡಿದ ಅಡಿಗೆಯನು ಮನದುಂಬಿ ಬಡಿಸುವನು
    ದರ ಏರಿಕೆಯ ಕತ್ತರಿಗೆಲ್ಲ ತತ್ತರಿಸುವವ ಈತನೇ
    ಹೊಟ್ಟೆಯಲ್ಲಿ ಯಾವತ್ತೂ ಹಸಿವೆಯ ಬಡವಾಗ್ನಿಯುಳ್ಳವ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ