ಮನಸಿನಲ್ಲೇ ಮಂಡಿಗೆ ತಿನ್ನಬೇಕಾದವ
ಅಲ್ಪ ತೃಪ್ತಿ ಈತನ ಅನಿವಾರ್ಯತೆ
ಮಹತ್ವಾಕಾಂಕ್ಷೆ, ಕನಸು, ಆಶಾವಾದ ಇಲ್ಲದವನೂ ಬಡವನೇ
ಹಣವಿದ್ದವರೆಲ್ಲ ಸಿರಿವಂತರಲ್ಲ...ಗುಣಶ್ರೀಮಂತಿಕೆ ಇಲ್ಲದಿದ್ದರೆ
ಕಾನೂನಿನ ಬಲೆಗೆ ಸಿಕ್ಕಿಬೀಳುವ ಚಿಕ್ಕ ಮೀನು
ಹಡೆದ ಕೂಸನ್ನೂ ಸಾಕುವಷ್ಟು ಕಾಸು ಇಲ್ಲದವ
ಅರ್ಥವಿಲ್ಲದ ಜೀವನವೇ ವ್ಯರ್ಥವೆಂದು ಭಾವಿಸಿದಾತ
ಕಳ್ಳರಿಂದ ಭಯವಿಲ್ಲದವ
ಸಂತೆಯಲ್ಲೂ ನಿದ್ರಿಸಬಲ್ಲವ
ಈತನ ಬಳಿ ಹಣದ ಜೊತೆಯಲ್ಲಿ ಅದರ ಉಪ ಉತ್ಪನ್ನಗಳಾದ ಗರ್ವ, ದರ್ಪಗಳೂ ಇಲ್ಲದವ
ಬ್ಯಾಂಕ್ಗಳ ಲಾಭದಲ್ಲಿ ಈತನ ಪಾಲೇ ಹೆಚ್ಚು
ದೇಶದ ಬೆನ್ನುಲುಬು ರೈತ ಶಾಶ್ವತ ಬಡವ
ತಿಂಗಳಾಂತ್ಯದ ಸಂಬಳಕ್ಕಾಗಿ ತಿಂಗಳಿಡೀ ಕಾದು ತಿಂಗಳ ಮೊದಲೇ ಹಣವನ್ನೆಲ್ಲ ಖರ್ಚು ಮಾಡಿಕೊಳ್ಳುವವ
ದುಃಖ ಶಬ್ದದ ಸಮಾನಾರ್ಥಕ, ಕಷ್ಟಗಳಿಗೆ ಇಷ್ಟವಾದ ಗಿರಾಕಿ
-ವಿಶ್ವನಾಥ ಸುಂಕಸಾಳ
vishwasunkasal@yahoo.com