ಸಂಪಾದಕೀಯ

ಅಂಧನೊಬ್ಬ ವೈದ್ಯನಾದ ಕಥೆ

ಡೇವಿಡ್ ಹಾರ್ಟ್‌ಮನ್ ಗ್ಲುಕೋಮಾಕ್ಕೆ ತುತ್ತಾಗಿ ಚಿಕ್ಕವನಿರಬೇಕಾದರೇ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡ ನತದೃಷ್ಟ. ಆದರೆ ಅವನಿಗೆ ವೈದ್ಯನಾಗಬೇಕೆಂಬ ಆಸೆಯಿತ್ತು. ಅಂಧನೊಬ್ಬನಿಗೆ ಯಾವ ವ್ಯದ್ಯಕೀಯ ಕಾಲೇಜಿನಲ್ಲಿ ಸೀಟು ದೊರೆಯಲು ಸಾಧ್ಯ? ಚಿಕ್ಕಂದಿನಲ್ಲಿ ಶಬ್ದಗ್ರಹಣದಿಂದಲೇ ಬೇಸ್‌ಬಾಲ್ ಆಡುತ್ತಿದ್ದ ಡೇವಿಡ್ ಅಂಧರ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಕಾಲೇಜಿನಲ್ಲಿ ಓದಿ ಪದವೀಧರನೂ ಆದ. ಆದರೆ ಅದರಿಂದ ಸಮಾಧಾನಗೊಳ್ಳದೆ, ವೈದ್ಯನಾಗಲೇಬೇಕೆಂದು ದೃಢ ನಿಶ್ಚಯ ಮಾಡಿ ಹಲವಾರು ವೈದ್ಯಕೀಯ ಕಾಲೇಜುಗಳಿಗೆ ಅರ್ಜಿ ಹಾಕಿದ. ಅವನ ತಂದೆತಾಯಿ ಮತ್ತು ಶಿಕ್ಷಕರು ಡೇವಿಡ್‌ಗೆ ವೈದ್ಯಕೀಯ ಶಿಕ್ಷಣದ ಆಸೆ ಬಿಡಲು ಸಲಹೆ ನೀಡಿದರಾದರೂ, ಆತ "ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಅಂಗವಿಕಲತೆ ಇರುತ್ತದೆ, ವಿಶೇಷವಾದ ಸಾಧನೆ ಮಾಡದಿರುವವನೇ ವಿಕಲಾಂಗ" ಎಂದುಬಿಟ್ಟ. ತನ್ನ ಆಸೆಯಂತೆ ಮನೋರೋಗ ತಜ್ಞನಾಗಲೇಬೇಕೆಂಬ ನಿರ್ಧಾರ ಮಾಡಿದ. ಎಂಟು ಬಾರಿ ಪ್ರಯತ್ನಿಸಿದರೂ ಆತನ ಪ್ರಯತ್ನ ಮಾತ್ರ ಕೈಗೂಡಲಿಲ್ಲ. ಕೊನೆಗೆ ಒಂಬತ್ತನೇ ಬಾರಿ ಮತ್ತೆ ಅರ್ಜಿ ಸಲ್ಲಿಸಿದಾಗ ಟೆಂಪಲ್ ಯುನಿವರ್ಸಿಟಿಯ ವೈದ್ಯಕೀಯ ಪ್ರವೇಶ ಮಂಡಳಿ ಸದಸ್ಯರಾಗಿದ್ದ ಡಾ.ಎಂ. ಪ್ರಿನ್ಸ್ ಬ್ರಹಮ್ ಅವರು ಡೇವಿಡ್‌ನ ನೆರವಿಗೆ ಬಂದರು. ಅವರು ಡೇವಿಡ್ ಪರವಾಗಿ ವಾದಿಸಿ ಸೀಟು ದೊರಕಿಸಿಕೊಡಲು ಯಶಸ್ವಿಯಾದಾಗ ಆ ಯುವಕನಿಗಾದ ಸಂತೋಷ ಅಷ್ಟಿಷ್ಟಲ್ಲ. ಕೇವಲ ಸ್ಪರ್ಶಜ್ಞಾನದಿಂದ ಶರೀರಶಾಸ್ತ್ರವನ್ನು ಅಭ್ಯಾಸ ಮಾಡಿದ. ಅನೇಕ ಅಂಧ ವಿದ್ಯಾರ್ಥಿಗಳು ಮತ್ತು ಅಂಧರ ಧ್ವನಿಮುದ್ರಣ ಸಂಸ್ಥೆ ಪಠ್ಯ ಪುಸ್ತಕಗಳ ಧ್ವನಿಸುರಳಿಗಳನ್ನು ಮಾಡಿಕೊಟ್ಟು ಸಹಕರಿಸಿದರು. ಅವನ ಸಹಪಾಠಿಗಳು ಸೂಕ್ಷ್ಮದರ್ಶಕದಲ್ಲಿ ಕಂಡುದನ್ನು ವಿವರಿಸಿ ಹೇಳುತ್ತಿದ್ದರು.
ಪ್ರತಿನಿತ್ಯ ಹತ್ತುಗಂಟೆಗಳ ಅಧ್ಯಯನ ನಡೆಸಿ 1976ರಲ್ಲಿ ಅಂತಿಮ ಪರೀಕ್ಷೆಯಲ್ಲಿ ಜಯಗಳಿಸಿದಾಗ ವ್ಯೆದ್ಯಕೀಯ ಶಾಸ್ತ್ರದಲ್ಲಿ ಪದವಿ ಪಡೆದ ಮೊದಲ ಅಂಧ ವ್ಯಕ್ತಿಯಾಗಿ ಡೇವಿಡ್ ಹಾರ್ಟ್‌ಮನ್ ಹೊರಹೊಮ್ಮಿದ್ದ. ಇದೊಂದು ದಾಖಲೆಯಾಗಿ ಪರಿಗಣಿಸಲ್ಪಟ್ಟಿತು. ಮುಂದೆ ವೈದ್ಯನಾಗಿಯೂ ಸಹ ಯಶಸ್ವಿಯಾದ. ಅವನ ಸ್ಪರ್ಶ ಜ್ಞಾನ ಮತ್ತು ಶ್ರವಣ ಸಾಮರ್ಥ್ಯ ಅದ್ಭುತವಾಗಿದ್ದುದರಿಂದ ರೋಗಿಗಳ ಜೊತೆ ನಡೆಸುವ ಸಂವಾದಗಳಿಂದಲೇ ರೋಗ ಲಕ್ಷಣಗಳನ್ನು ತಿಳಿದು ಚಿಕಿತ್ಸೆ ನೀಡಲಾರಂಭಿಸಿದ. 'ಅದೊಂದು ಪವಾಡ ಸದೃಶ್ಯವೆನಿಸಿದರೂ, ಮಾನವೀಯ ಭಾವನೆಗಳಿಗೆ ದೊರೆತ ಅದ್ಭುತ ವಿಜಯದ ಪ್ರತೀಕ' ಎಂಬ ಪ್ರಶಂಸೆಗೆ ಪಾತ್ರನಾದ ಡಾ.ಡೇವಿಡ್ ಹಾರ್ಟ್‌ಮನ್ ರೊನೋಕ್‌ನಲ್ಲಿ ನೆಲಸಿ ಜನಸೇವೆ ಮಾಡುತ್ತಿದ್ದು ಉತ್ತಮ ಮನೋರೋಗ ಶಾಸ್ತ್ರಜ್ಞನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. "ವೈಟ್ ಕೋಟ್, ವೈಟ್ ಕೇನ್‌" ಎಂಬುದು ಡೇವಿಡ್ ಆತ್ಮಚರಿತ್ರೆಯಾಗಿದೆ.  


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!