ಪೂರ್ವಿಕರಿಂದ ಆಚರಿಸಿಕೊಂಡು ಬಂದಿರುವ ಪರ್ವ
ನವ ಉತ್ಸಾಹದ ವರ್ಧಕ ಈ ಉತ್ಸವ
ಆಚಾರದ ಆಚರಣೆ
ಹೊಸ ಬಟ್ಟೆ ತೊಟ್ಟು ಹಳೆಯ ಬೇಸರವೆಲ್ಲ ಬಿಟ್ಟು ಕುಣಿಯುವ ಕ್ಷಣ
ಕಹಿಯನ್ನೆಲ್ಲ ಮರೆತು ಸಿಹಿಯನ್ನು ತಿಂದು ಮೆರೆಯಲೊಂದು ನೆವ
ಪಟಾಕಿ ಸುಟ್ಹಾಕಿ ಅಭಿಯಾನ
ಇಬ್ಬದಿಯ ಕೀಲು ಮುರಿಯುವ ಸಾಲಗಾರನ ಆಗಮನಕ್ಕೆ ಆಮಂತ್ರಣ
ಸಾಲು ಸಾಲು ಹಬ್ಬ, ಸಾಲು ಸಾಲದ ಮೂಲ
ಆಯಾಸವೆಲ್ಲ ನೀಗಿಸುವ ಪಾಯಸದೂಟದ ದಿನ
ಇಷ್ಟರೊಂದಿಗೆ ಸೇರಿ ಕಷ್ಟ ಸುಖ ಹಂಚಿಕೊಳ್ಳುವ ಸಂತಸದ ಘಳಿಗೆ
ನಗರವೆಲ್ಲ ಹಳ್ಳಿಗೆ ವಲಸೆ ಹೋಗುವ ಸಂದರ್ಭ
ರಜಾ ಮತ್ತು ಮಜಾ
ಖಾಸಗೀ ಬಸ್ಸುಗಳಿಗೆ ಕಿಸೆ ತುಂಬಿಸಿಕೊಳ್ಳುವ ಮತ್ತು ಜನ ಸಾಮಾನ್ಯರ ಕಿಸೆ ಖಾಲಿಯಾಗುವ ಸಂದರ್ಭ
ಕ್ರಿಯಾಶೀಲನಿಗೆ ಪ್ರತಿಕ್ಷಣವೂ ಹಬ್ಬವೇ
ಮನದಲ್ಲಿ ಮೂಡಬೇಕಾದ ಸಂತಸದ ಭಾವ
ದೇವರಿಗೆ ಅಪರೂಪಕ್ಕೊಮ್ಮೆ ಒಳ್ಳೆಯ ನೈವೇದ್ಯ ಒದಗಿಸುವ ದಿನ
-ವಿಶ್ವನಾಥ ಸುಂಕಸಾಳ
vishwasunkasal@yahoo.com