ಸಂಪಾದಕೀಯ

ಕಾಲಿಲ್ಲ ಆದರೆ ಕನಸಿದೆ

ಕಾಲಿಲ್ಲ ಆದರೆ ಕನಸಿದೆ
ಗಿರೀಶ್ ಶರ್ಮ ಎಂಬ ಯುವಕನ ಕಥೆ ಕೇಳಿ. ಗುಜರಾತ್‌ನ ರಾಜ್ಕೋಟ್‌ನ ಗಿರೀಶ್ ಎರಡು ವರ್ಷದವನಿದ್ದಾಗ ಒಂದು ರೈಲು ದುರಂತಕ್ಕೆ ಸಿಲುಕಿದ. ಮೊಳಕಾಲವರೆಗೆ ಅವನ ಬಲಗಾಲನ್ನು ತೆಗೆದು ಹಾಕಲಾಯಿತು. ಒಂಟಿಕಾಲಿನ ಆ ಬಾಲಕನನ್ನು ನೋಡಿ ಎಲ್ಲರೂ ಮರುಗುವವರೇ. ಇನ್ನು ಈ ಮಗುವಿನ ಭವಿಷ್ಯ ಮುಗಿಯಿತು ಎಂದು ಎಲ್ಲರೂ ಭಾವಿಸಿದರು. ಆದರೆ ಈ ಬಾಲಕ ಒಂದೇ ಕಾಲಿನಲ್ಲಿ ಇತರರು ಮಾಡುವ ಎಲ್ಲ ಕೆಲಸಗಳನ್ನೂ ಮಾಡತೊಡಗಿದ. ಎಲ್ಲರಂತೆ ಕ್ರಿಕೆಟ್, ಫುಟ್‌ಬಾಲ್, ಬ್ಯಾಡ್ಮಿಂಟನ್ ಆಡತೊಡಗಿದ. ಹೀಗೆ ಆಡುವಾಗ ತಾನೊಬ್ಬ ಅಂಗವಿಕಲ ಎಂದು ಯಾವಾಗಲೂ ಭಾವಿಸಲಿಲ್ಲ. ದೊಡ್ಡವನಾದಂತೆಲ್ಲಾ ಸೈಕಲ್ ಸವಾರಿ ಕಲಿತ. ಯಾರೂ ಅವನನ್ನು ಹಿಂದಕ್ಕೆ ಹಾಕಲಾಗದಷ್ಟು ವೇಗವಾಗಿ ಸೈಕಲ್ ತುಳಿಯುವ ಶರ್ಮ ಎಲ್ಲರ ಅಚ್ಚರಿಗೆ ಕಾರಣನಾಗಿದ್ದಾನೆ. ಮೊದಲಬಾರಿಗೆ ಭಾರತದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ಸ್ಫರ್ಧೆಗಳಲ್ಲಿ ಭಾಗವಹಿಸಿ, ಚಿನ್ನದ ಪದಕ ಗಳಿಸಿದ. ನಂತರ ಇಸ್ರೇಲ್, ಥಾಯ್ಲೆಂಡ್ ಮತ್ತು ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಫರ್ಧೆಗಳಲ್ಲಿಯೂ ಭಾಗವಹಿಸಿದ. ವಿದೇಶಕ್ಕೆ ಅವನು ತನ್ನ ಹಣದಿಂದಲೇ ಹೋಗಿಬಂದ. ಆದರೆ ನಂತರ ನಡೆದ ಸ್ಫರ್ಧೆಗಳಲ್ಲಿ ಭಾಗವಹಿಸಲು ಬೇಕಾದ ಆರ್ಥಿಕ ಅನುಕೂಲಗಳಿಲ್ಲದ್ದರಿಂದ ಆತನಿಗೆ ಭಾಗವಹಿಸಲಾಗಲಿಲ್ಲ. ಕ್ರಿಕೆಟ್ ಆಟಗಾರರಿಗೆ ಕೋಟಿಗಟ್ಟಲೆ ಹಣ ನೀಡುವ ಸರ್ಕಾರವಾಗಲೀ, ಅಪಾರ ಹಣಕೊಟ್ಟು ಪ್ರಾಯೋಜಕತ್ವವನ್ನು ವಹಿಸಿಕೊಳ್ಳುವ ಉದ್ಯಮಿಗಳಾಗಲೀ ಶರ್ಮನ ನೆರವಿಗೆ ಬರಲಿಲ್ಲ. ವಿದೇಶಕ್ಕೆ ಹೋಗಿಬರಲು ಹಣವಿಲ್ಲದ್ದರಿಂದ ಅನೇಕ ಸ್ಫರ್ಧೆಗಳಲ್ಲಿ ಭಾಗವಹಿಸಲಾಗಲಿಲ್ಲ. ಶಟಲ್‌ಕಾಕ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಚಾಂಪಿಯನ್ ಆಗಿರುವ ಶರ್ಮಾಗೆ ನೆರವು ನೀಡಿದ್ದರೆ, ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಿದ್ದನೋ ಏನೋ. ಆದರೆ ಸರ್ಕಾರ ಇವನ ಮನವಿಗೆ ಸ್ಪಂದಿಸಲಿಲ್ಲ. ಉದ್ಯಮಿಗಳ ಬಳಿ ಹೋದಾಗ, "ನಿನ್ನ ಆಟವನ್ನು ಯಾರು ನೋಡುತ್ತಾರೆ?" ಎಂದು ಹಂಗಿಸಿದರು. ಹೀಗೆ ಅವಮಾನಿತನಾದರೂ ಛಲ ಬಿಡದ ಗಿರೀಶ್ ಇಂದಿಗೂ ಪ್ರತಿನಿತ್ಯ ಆರು ಗಂಟೆಗಳಾದರೂ ಅಭ್ಯಾಸ ಮಾಡುತ್ತಿರುತ್ತಾನೆ. ಈಜು, ಟೆನ್ನಿಸ್‌ನಲ್ಲಿಯೂ ಪರಿಣತಿ ಪಡೆದು ಪ್ರಾಯೋಜಕತ್ವಕ್ಕಾಗಿ ಕಾದಿದ್ದಾನೆ. ಆದರೆ ಕ್ರಿಕೆಟ್ ಒಂದನ್ನೇ ಪರಮೋಚ್ಚ ಆಟವೆಂದು ಭಾವಿಸಿರುವ ನಮ್ಮ ಜನಕ್ಕೆ ಗಿರೀಶ್ ಮೊರೆ ಕೇಳಿಸುವುದಾದರೂ ಹೇಗೆ? ನನಗೆ ಬೇಕಾಗಿರುವುದು ಅನುಕಂಪವಲ್ಲ, ಪ್ರೋತ್ಸಾಹ. ವರ್ಷಕ್ಕೊಮ್ಮೆ ಡಿಸೆಂಬರ್ ಮೂರರಂದು ಅಂಗವಿಕಲ ದಿನಾಚರಣೆ ಆಚರಿಸಿದರೆ ಅಂಗವಿಕಲರ ಉದ್ಧಾರವಾಗುವುದಿಲ್ಲ ಎಂಬುದು ಗಿರೀಶ್ ಅಭಿಪ್ರಾಯ. ಕ್ರಿಕೆಟ್ ಆಟಗಾರರಿಗೆ ಹಲವು ಕೋಟಿಗಳನ್ನು ನೀಡುವ ಸರ್ಕಾರ ತನ್ನಂತಹ ಆಟಗಾರರಿಗೆ ಕೆಲವು ಲಕ್ಷಗಳನ್ನು ನೀಡಿದರೆ, ವಿಶ್ವದಲ್ಲಿ ಭಾರತದ ಪತಾಕೆಯನ್ನು ಹಾರಿಸಬಹುದೆಂಬ ನಿರೀಕ್ಷೆಯಲ್ಲಿ ಗಿರೀಶ್ ಕಾಲ ಸವೆಸುತ್ತಿದ್ದಾನೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!