ಸಂಪಾದಕೀಯ

ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ

ಮಧ್ಯ ಪ್ರದೇಶದ ಇಂದೂರಿನ ಪಲಕ್ ಮುಚ್ಚಲ್ ಇನ್ನೂ 21ರ ಸ್ಫುರದ್ರೂಪಿ ತರುಣಿ. ಒಳ್ಳೆಯ ಹಾಡುಗಾರ್ತಿ. ಇಷ್ಟೇ ಆಗಿದ್ದರೆ, ಈ ಕಾಲಂನಲ್ಲಿ ಬರೆಯುವ ಅವಶ್ಯಕತೆ ಇರಲಿಲ್ಲ. ಆದರೆ ಅವರು ಮಾಡಿರುವ ಅದ್ಭುತ ಸಾಧನೆ ಇತರರಿಗೆ ಮಾರ್ಗದರ್ಶಿಯಾಗಿದೆ. ಕೇವಲ ಹಾಡುಗಾರ್ತಿಯಾಗಿರದೆ, ಸಮಾಜದ ನೋವಿಗೆ ಸ್ಪಂದಿಸುವ ಆಕೆಯ ತುಡಿತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತನ್ನ ತಮ್ಮ ಪಾಲಾಶ್ ಮಚ್ಚಲ್ ಜೊತೆಗೂಡಿ ನೂರಾರು ಕಾರ್ಯಕ್ರಮಗಳನ್ನು ನೀಡಿ 25 ಮಿಲಿಯನ್‌ನಷ್ಟು ಹಣ ಸಂಪಾದನೆ ಮಾಡಿದ್ದಾಳೆ. ಆದರೆ ಅದು ತನಗಾಗಿ ಅಲ್ಲ, ಬದಲಾಗಿ ಬಡ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಾಗಿ ವೆಚ್ಚಮಾಡಲು. ಇದುವರೆಗೆ 572 ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿ ತನ್ನ ಜೀವನವನ್ನು ಪಾವನಗೊಳಿಸಿರುವ ಪಲಕ್ ಈಗಾಗಲೇ ಗಿನ್ನಿಸ್ ಪುಸ್ತಕ ಮತ್ತು ಲಿಮ್ಕಾ ದಾಖಲೆಗೆ ತನ್ನ ಹೆಸರನ್ನು ಸೇರ್ಪಡೆ ಮಾಡಿಕೊಂಡಿದ್ದಾಳೆ. ಕೇವಲ ನಾಲ್ಕು ವರ್ಷದವರಾಗಿದ್ದಾಗಲೇ ಹಾಡಿ ರಂಜಿಸುತ್ತಿದ್ದ ಪಲಾಕ್ 17 ಭಾಷೆಗಳಲ್ಲಿ ಹಾಡಬಲ್ಲಳು. ಕೆಲವು ಚಿತ್ರಗಳಿಗೂ ಸಹ ಹಿನ್ನಲೆ ಗಾಯಕಳಾಗಿ ಪ್ರಸಿದ್ಧಳಾಗಿದ್ದಾಳೆ. ಕಳೆದ ವರ್ಷ ಬಿಡುಗಡೆಯಾದ ಏಕ್ ಥಾ ಟೈಗರ್ ಮತ್ತು ಆಶಿಕಿ-2ರಲ್ಲಿ ಹಾಡಿದ್ದಾಳೆ. ಕನ್ನಡದಲ್ಲಿಯೂ ಸಾಯಿ ಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಚಿತ್ರವೊಂದಕ್ಕೆ ಎರಡು ಹಾಡು ಹಾಡಿದ್ದಾಳೆ. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಏಳು ವರ್ಷದ ಬಾಲಕಿಯಾಗಿದ್ದ ಪಲಕ್ ಇಂದೂರಿನ ಅಂಗಡಿಗಳಿಗೆ ತೆರಳಿ, ಹಾಡು ಹೇಳಿ 25 ಸಹಸ್ರ ರುಪಾಯಿಗಳನ್ನು ಸಂಗ್ರಹಿಸಿ ಯುದ್ಧ ನಿಧಿಗೆ ನೀಡಿದ್ದಳು.
ಅದೇ ರೀತಿ ಒಡಿಶಾ ಚಂಡಮಾರುತದ ನಿರಾಶ್ರಿತರಿಗೂ ನೆರವಾಗಿದ್ದಳು. ಮೊದಲ ಬಾರಿ ಇಂದೂರಿನ ಒಬ್ಬ ಬಾಲಕನಿಗೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಒಂದು ಧರ್ಮಾರ್ಥ ಸಂಗೀತ ಕಾರ್ಯಕ್ರಮ ನೀಡಬೇಕೆಂಬ ಕರೆಬಂದಾಗ ಪಲಕ್‌ಗೆ ಇನ್ನೂ ಎಂಟು ವರ್ಷ. ಎತ್ತಿನ ಗಾಡಿಯ ಮೇಲೆ ಹಾಡುತ್ತಾ ಇಂದೂರಿನ ಬೀದಿಬೀದಿಗಳಲ್ಲಿ ತಿರುಗಿ 51ಸಾವಿರ ರು. ಸಂಗ್ರಹಿಸಿ ಆ ಬಾಲಕನ ಶಸ್ತ್ರಚಿಕಿತ್ಸೆಗೆ ನೆರವಾದಳು. ಬೆಂಗಳೂರಿನ ದೇವಿಪ್ರಸಾದ್ ಶೆಟ್ಟಿಯವರು ಆಕೆಯ ಕಳಕಳಿಗೆ ಸ್ಪಂದಿಸಿ ಆ ಬಾಲಕನಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ನಂತರ ಪಲಕ್ ಮುಚ್ಚಲ್ ಹಾರ್ಟ್ ಫೌಂಡೇಷನ್ ಸ್ಥಾಪಿಸಿ ಆ ಮೂಲಕ ಇದುವರೆಗೆ 1460 ಕಾರ್ಯಕ್ರಮಗಳನ್ನು ನೀಡಿ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾಳೆ. ಫಲಾನುಭವಿಗಳಿಂದ ಏನನ್ನೂ ನಿರೀಕ್ಷೆ ಮಾಡದ ಈಕೆ ನೆನಪಿಗೋಸ್ಕರ ಅವರಿಂದ ಒಂದು ಬೊಂಬೆಯನ್ನು ಮಾತ್ರ ಪಡೆಯುತ್ತಾಳೆ. ರಾಷ್ಟ್ರೀಯ ಬಾಲ ಪುರಸ್ಕಾರ್ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿರುವ ಪಲಕ್ ಸೂಚಿಸುವ ರೋಗಿಗಳಿಗೆ ಅತಿ ಕಡಿಮೆ ದರದಲ್ಲಿ ಅಥವಾ ಉಚಿತ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಯವರು ಮುಂದೆ ಬಂದಿದ್ದಾರೆ. ಇನ್ನೂ 621 ಮಕ್ಕಳು ಹೃದಯ ಶಸ್ತ್ರ ಚಿಕಿತ್ಸೆಗಾಗಿ ಪಲಕ್ ಫೌಂಡೇಷನ್‌ನಲ್ಲಿ ನೊಂದಾಯಿಸಿಕೊಂಡು ತಮ್ಮ ಸರದಿಗಾಗಿ ಕಾದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಧನೆಗೈದ ಪಲಕ್ ತನ್ನ ಜೀವನವನ್ನು ಸಮಾಜಸೇವೆಗೆ ಮೀಸಲಾಗಿಟ್ಟಿರುವುದು ಮೆಚ್ಚತಕ್ಕದ್ದು.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!