ಕೆಲವು ಹೆಂಗಸರು ಇದನ್ನು ಇಷ್ಟಪಡುವುದಿಲ್ಲ. ಕಾರಣ ಇದರಲ್ಲಿ ಮಾತು ಕಡಿಮೆ.
ಗಣಪತಿಯ ಸೊಂಡಿಲಿನಂತೆ ವಕ್ರವಾದ, ಶುಂಡಿಲಿಯ ಮೂತಿಯಂತೆ ಚೂಪಾದ ಮಾತು
ಹೇಳುವ ಬಗೆ ವಕ್ರವಾದರೂ ಚುಚ್ಚುವಾಗ ಮಾತ್ರ ನೇರವಾಗಿಯೇ ನಾಟುತ್ತದೆ
ನೀರಸವನ್ನೂ ಸರಸವಾಗಿ ಹೇಳುವ ಮಾತು
ನೋಡಲು ಇದು ವಕ್ರೋಕ್ತಿ. ನಿಜದಲ್ಲಿ ಇದು ನೇರ, ದಿಟ್ಟ, ನಿರಂತರ...
ವಿಶ್ವೇಶ್ವರ ಭಟ್ಟರ ಬತ್ತಳಿಕೆಯಲ್ಲಿರುವ ಡೊಂಕು ಮತ್ತು ಕೊಂಕು ಬಾಣಗಳು
ಇದರಲ್ಲಿ ಹೇಳಲ್ಪಡುವುದೆಲ್ಲ ಸತ್ಯವೇ. (ಗಂಡಸರ ಪ್ರಕಾರ)
ವಿಶ್ವನಾಥ ಸುಂಕಸಾಳ