ದೇಶ, ವಿದೇಶಗಳೆಲ್ಲದರ ಪ್ರದೇಶಗಳನ್ನು ಸುತ್ತಿ ವೇಷ ಭಾಷೆ ಅರಿಯುವ ಪರಿವೇಷ
ರಜೆಯಲ್ಲಿ ಸಾಧಿಸುವ ಪರಮ ಪುರುಷಾರ್ಥ
ಗತ್ತು ತೊರೆದು ಜಗತ್ತು ತಿರುಗುವ ಪ್ರಕ್ರಿಯೆ
ಭೂಮಿ ಸುತ್ತ ನಾವೂ ತಿರುಗುವಿಕೆ
ಸಚಿವ ಶಾಸಕರು ಆಯ್ಕೆಯಾಗಿ ಹೋದ ಮೇಲೆ ಮಾಡುವ ಏಕೈಕ ಕೆಲಸ
ಇದ್ದಲ್ಲೇ ಸುತ್ತು ಹೊಡೆಯುವುದಕ್ಕಿಂತ ದೇಶ ಸುತ್ತುವುದು ಉತ್ತಮ
ಪ್ರಪಂಚವನ್ನು ನಮಗೂ, ನಮ್ಮನ್ನು ಪ್ರಪಂಚಕ್ಕೂ ಪರಿಚಯಿಸುವ ಮಾಧ್ಯಮ
ಲೋಕದ ಬಗೆಗಿನ ಭ್ರಮೆಗಳನ್ನು ಹರಿಯುವ ಪರಿಭ್ರಮಣ
ವಿಶ್ವನಾಥ ಸುಂಕಸಾಳ