ಶ್ರೀಧರ ಡಿ. ರಾಮಚಂದ್ರಪ್ಪ, 9880791106
ಸಾಲ ಕೊಟ್ಟವನಿಗೂ ತೆಗೆದುಕೊಂಡವನಿಗೂ ಏನು ವ್ಯತ್ಯಾಸ?
ಇಬ್ಬರೂ ಎಚ್ಚರಿಕೆಯಿಂದಿರಬೇಕು. ಸಾಲ ಮಾಡಿದವ ನೀಡಿದವನಿಂದ ತಪ್ಪಿಸಿಕೊಳ್ಳುವುದಕ್ಕೆ ಹಾಗೂ ಸಾಲ ನೀಡಿದವ ಅವನನ್ನು ಹಿಡಿಯುವುದಕ್ಕೆ.
ಜೆ. ಆರ್. ಆದಿನಾರಾಯಣಮುನಿ
ಆಕಸ್ಮಿಕಗಳು ಘಟಿಸಿದಾಗ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾ?
ನೀವು ಒಪ್ಪಿಕೊಳ್ಳದಿದ್ದರೆ ಆಕಸ್ಮಿಕಕ್ಕೇನೂ ನಷ್ಟವಿಲ್ಲ.
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಹೆಣ್ಣನ್ನೇಕೆ ಹೂವಿಗೆ ಹೋಲಿಸುತ್ತಾರೆ?
ತಾವು ದುಂಬಿಯಾಗುವ ಬಯಕೆಯಿಂದ.
ಕಾಳೀಹುಂಡಿ ಶಿವಕುಮಾರ್, ಮೈಸೂರು
ಅರ್ಥವಾಗದ ಏಕೈಕ ಪ್ರಶ್ನೆ ಹೆಣ್ಣು ಅಂತಾರಲ್ಲ..
ಉಳಿದೆಲ್ಲವಕ್ಕೆ ತಪ್ಪು ಉತ್ತರ ಕೊಟ್ಟೂ ಬಚಾವಾಗಬಹುದು.
ಕಂಚಗನಹಳ್ಳಿ ಧನಂಜಯ, 9141308498
ಬುದ್ಧಿಜೀವಿಗಳು ಉದ್ದನೆಯ ದಾಡಿ ಬಿಡುವುದರ ಸಂಕೇತ?
ಕ್ಷೌರ ಮಾಡಲಾಗದ ಆಲಸಿತನ. ನಿಮಗೂ ಇಷ್ಟವಾದರೆ ಅಪ್ಪಿಕೊಳ್ಳಬಹುದು.
ಬಾಣಭಟ್ಟ