ಪ್ರೊಫೆಸರ್: ಯಾವ್ನಾದ್ರೂ ಹುಡುಗಿಯರ ಹಾಸ್ಟಲ್ಗೆ ಹೋದ ಅಂದ್ರೆ ಮೊದಲನೆಯ ಸಲಕ್ಕೆ 100 ರುಪಾಯಿ ದಂಡ, ಎರಡನೆಯ ಸಲ 200, ಮೂರನೇ ಸಲ 300...
ಮರಿಕೋಲ್ಯ: ಸರ್ ಮಂತ್ಲಿ ಪಾಸ್ಗೆ ಎಷ್ಟು ಚಾರ್ಜ್ ಆಗುತ್ತೆ?
----
ಅಪ್ಪ(ಮಗನಿಗೆ): ಯಾಕೋ ಅಷ್ಟು ಸಪ್ಪಗಿದೀಯಾ?
ಮಗ: ಅಪ್ಪ ಅದೆಲ್ಲ ನಿನ್ನ ಮುಂದೆ ಮಾತಾಡೋ ವಿಷಯ ಅಲ್ಲ.
ಅಪ್ಪ(ಪ್ರೀತಿಯಿಂದ): ನನ್ನನ್ನ ನಿನ್ನ ಸ್ನೇಹಿತ ಅನ್ಕೊಂಡು ಏನು ನಡೀತು ಅಂತ ಹೇಳ್ಬಾರ್ದಾ?
ಮಗ(ಹೆಗಲ ಮೇಲೆ ಕೈ ಹಾಕಿ): ಏನೂಂತಾ ಹೇಳ್ಲಿ ಮಚ್ಚಿ? ನಿನ್ನೆ ಕುಡಿದ ಮತ್ತಲ್ಲಿ ಒಂದು ಮುತ್ತು ಕೊಟ್ಟೆ ಅಂತ ನಿನ್ನ ಅತ್ತಿಗೆ ಸಿಟ್ಟು ಮಾಡ್ಕೊಂಬಿಟ್ಟಿದಾಳೆ!