ನಿತೀಶ್ ಕುಮಾರ್ ಅವರಿಗೆ ನರೇಂದ್ರ ಮೋದಿ ಫೋನ್ ಮಾಡುತ್ತಾರೆ.
ಮೋದಿ: ನಿತೀಶ್ಜಿ, ನಿಮಗೆ ಎಷ್ಟು ಸ್ಥಾನಗಳು ಬಂದಿವೆ.
ನಿತೀಶ್: ಎರಡು.
ಮೋದಿ: ನಾನೂ ಎರಡರಲ್ಲಿ ಗೆದ್ದಿದ್ದೀನಿ. ಒಂದು ವಡೋದರಾ ಇನ್ನೊಂದು ವಾರಾಣಸಿ. ಇರಲಿ, ಈಗೇನು ಮಾಡಬೇಕು ಅಂದುಕೊಂಡಿದ್ದೀರಿ?
ನಿತೀಶ್: ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ.
ಮೋದಿ: ನಾನೂ ಅಷ್ಟೇ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಲಿದ್ದೇನೆ.
ನನನ
ಕೋಲ್ಯನಿಗೆ ರಾತ್ರಿ ಸಿಗರೇಟು ಸೇದುವ ಮನಸ್ಸಾಯಿತು. ಮನೆಯೆಲ್ಲ ಹುಡುಕಿದರೂ ಬೆಂಕಿಪೊಟ್ಟಣ ಮಾತ್ರ ಸಿಗಲಿಲ್ಲ. ಹುಡುಕಿ, ಹುಡುಕಿ ಹಗಾಲಾಗುತ್ತಾ ಬಂತು. ಕೊನೆಗೆ ಸುಸ್ತಾಗಿ ಪ್ರಯತ್ನ ಕೈಬಿಟ್ಟ ಕೋಲ್ಯ ಮೊಂಬತ್ತಿ ಆರಿಸಿ ಮಲಗಿದ!