ಸಂಪಾದಕೀಯ

ಬ್ರೇಕಿಲ್ಲದ ಗಾಡಿ ಮತ್ತು ಬ್ರೇಕಿಂಗ್ ನ್ಯೂಸ್ ನಡುವೆ ಸಾಮ್ಯತೆಯೇನು?

ತಲವಾಟ ಮಂಜುನಾಥ, ಸಾಗರ
ಬ್ರೇಕಿಲ್ಲದ ಗಾಡಿ ಮತ್ತು ಬ್ರೇಕಿಂಗ್ ನ್ಯೂಸ್ ನಡುವೆ ಸಾಮ್ಯತೆಯೇನು?
ಬ್ರೇಕಿಲ್ಲದ ಗಾಡಿ ನಡೆಸಿದರೆ ಬ್ರೇಕಿಂಗ್ ನ್ಯೂಸ್ನಲ್ಲಿ ಬರಬಹುದು!

ಮಂಜುನಾಥ್, ಅಣಜಿ, ದಾವಣಗೆರೆ
ಲವ್ ಮಾಡಿ ಮದುವೆಯಾಗಬೇಕೋ ಅಥವಾ ಮದುವೆಯಾದ ಮೇಲೆ ಲವ್ ಮಾಡಬೇಕೋ?
ಹೇಗಾದರೂ ಸರಿ, ಆದರೆ ಲವ್ ಮಾತ್ರ ಕೊನೆಯವರೆಗೂ ಇರಬೇಕು

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮುಖವನ್ನು ನೋಡಿಕೊಳ್ಳೋ ಕನ್ನಡಿಯಿದ್ದಂತೆ ಮನಸ್ಸನ್ನು ನೋಡಿಕೊಳ್ಳುವ ಕನ್ನಡಿಯಿದ್ದಿದ್ರೆ?
ನಿಮ್ಮ ಕನ್ನಡಿಯನ್ನು ಬೇರೆಯವರು ಕದ್ದು ನೋಡ್ತಿದ್ರು!

ಬಸವನಗೌಡ, ಚನ್ನಗಿರಿ
ಒಂದೊಮ್ಮೆ ಮನುಷ್ಯನಿಗೆ ಕತ್ತಲೆಯಲ್ಲೂ ಕಣ್ಣು ಕಾಣುವಂತಿದ್ದರೆ ಹೇಗಿರುತ್ತಿತ್ತು?
ಗೂಬೆ ನನ್ಮಕ್ಳು ಅಂತ ಕರೆಯಬಹುದಿತ್ತು.

ಸಂದೇಶ ಭಗೀರಥ್, ಬೆಂಗಳೂರು
ನನ್ನ ಪ್ರೇಯಸಿಗೆ ಚಂದ್ರ, ತಾರೆಗಳು ಬೇಕಂತೆ..
ಅವನ್ನೆಲ್ಲ ತೊಗೊಂಡು ಏನ್ಮಾಡ್ತೀಯ ಅಂತ ಕೇಳ್ಬೇಕಿತ್ತು?!


 ಬಾಣಭಟ್ಟ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ