ಜುನಾಘಡ್: ಹಾಲಿ ಲೋಕಸಭಾ ಚುನಾವಣೆಯ ನಿಮಿತ್ತ ದೇಶಾದ್ಯಂತ ಮೂರನೇ ಹಂತದ ಹಾಗೂ ಕರ್ನಾಟಕದ ಎರಡನೇ ಹಂತದ ಮತದಾನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೊನೆಯ ಕ್ಷಣದಲ್ಲಿ ಬಿರುಸಿನ ಮತದಾನವಾಗುತ್ತಿದೆ.
ಇನ್ನು ದೇಶದ ಪ್ರತೀಯೊಬ್ಬ ನಾಗರೀಕನೂ ಮತದಾನದ ಹಕ್ಕಿನಿಂದ ವಂಚಿತನಾಗಬಾರದು ಎಂಬ ಚುನಾವಣಾ ಆಯೋಗ ಸುದುದ್ದೇಶವಾದರೂ, ದೇಶದ ಮಹಾನಗರಗಳಲ್ಲಿ ನಗಣ್ಯವಾಗುತ್ತಿದೆ. ಗುಜರಾಜ್ ನ ಒಂದು ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ.
ಅಚ್ಚರಿಯಾದರೂ ಇದು ಸತ್ಯ.. ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿರುವ ಜುನಾಘಡ್ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ. ಈ ಜುನಾಘಡ್ ನಲ್ಲಿ ಏಕೈಕ ಮತದಾರನಿದ್ದು, ಈತನಿಗಾಗಿಯೇ ಚುನಾವಣಾ ಆಯೋಗ ಲಕ್ಷಾಂತರ ಹಣ ವ್ಯಯಿಸಿ ಇಲ್ಲಿ ಮತಗಟ್ಟೆ ಸ್ಥಾಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಜುನಾಘಡ್ ನಲ್ಲಿ ಭರತ್ ದಾಸ್ ಬಾಪು ಎಂಬ ಮತದಾರನಿದ್ದು, ಈತನ ಏಕೈಕ ಮತಕ್ಕಾಗಿ ಇಲ್ಲಿ ಚುನಾವಣಾ ಆಯೋಗ ಮತಗಟ್ಟೆ ಸ್ಥಾಪನೆ ಮಾಡುವ ಮೂಲಕ ಒಂದೊಂದು ಮತಗಳೂ ಮುಖ್ಯ ಎಂಬ ಸಂದೇಶ ಸಾರಿದೆ.
ಅಂತೆಯೇ ಭರತ್ ದಾಸ್ ಬಾಪು ಕೂಡ ಯಾವುದೇ ಕಾರಣಕ್ಕೂ ಮತದಾನದಿಂದ ತಪ್ಪಿಸಿಕೊಳ್ಳದೇ ಇಂದು ತನ್ನ ಹಕ್ಕು ಚಲಾಯಿಸಿ, ತಾನೂ ಕೂಡ ಜವಾಬ್ದಾರಿಯುತ ಪ್ರಜೆ ಎಂಬುದನ್ನು ಸಾಬೀತು ಪಡಿಸಿದ್ದಾನೆ. ಈ ಬಗ್ಗೆ ಮಾತನಾಡಿರುವ ಭರತ್ ದಾಸ್ ಬಾಪು, ' ಈ ಗ್ರಾಮದಲ್ಲಿರುವ ಏಕೈಕ ಮತದಾರ ನಾನು. ನಾನು ನನ್ನ ಮತ ಹಾಕಿದ್ದು, ಇಲ್ಲಿ ಇದೀಗ ಶೇ.100ರಷ್ಟು ಮತದಾನವಾಗಿದೆ ಎಂಬ ಖುಷಿಯಿದೆ. ನನ್ನೊಬ್ಬನಿಗಾಗಿ ಆಯೋಗ ಇಷ್ಟೆಲ್ಲ ಖರ್ಚು ಮಾಡಿ ಕಷ್ಟ ಪಟ್ಟು ಮತಗಟ್ಟೆ ಸ್ಥಾಪನೆ ಮಾಡಿದೆ. ಆ ಮೂಲಕ ನನಗೂ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದ್ದಾರೆ.
ಅಂತೆಯೇ ದೇಶದ ಪ್ರತೀಯೊಬ್ಬ ಪ್ರಜೆಯೂ ಮತದಾನ ಮಾಡುವಂತೆ ಭರತ್ ದಾಸ್ ಬಾಪು ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos