ಸ್ವಾರಸ್ಯ

ಚುನಾವಣೆ, ಮತದಾನವೆಂದರೆ ಅಲ್ಲಹಾಬಾದ್ ನ ಈ ಗ್ರಾಮದಲ್ಲಿ ಡಬಲ್ ಟ್ರಬಲ್!

Srinivas Rao BV
ಅಲ್ಲಾಹಾಬಾದ್: ಅಲ್ಲಹಾಬಾದ್ ನ ಮೊಹಮ್ಮದ್ ಪುರ್ ಉಮ್ರಿ ಗ್ರಾಮದಲ್ಲಿ ಚುನಾವಣೆ, ಮತದಾನವೆಂದರೆ ಅದು ಡಬಲ್ ಟ್ರಬಲ್,  ಚುನಾವಣೆ ನಡೆಸುವುದಕ್ಕೆ ಟ್ರಬಲ್ ಯಾಕೆ ಅಂತೀರಾ? ಅದಕ್ಕೆ ಕಾರಣ ಇಲ್ಲಿದೆ. 
ಈ ಗ್ರಾಮ ಅಪರೂಪವಾದದ್ದು, ಚುನಾವಣೆ ಬಂತೆಂದರೆ ಇಲ್ಲಿನ ಅಧಿಕಾರಿಗಳಿಗೆ ಭರ್ಜರಿ ತಲೆಬಿಸಿಯೇ ಕಾದಿರುತ್ತೆ. ಅವಳಿಗಳ ಗ್ರಾಮ ಎಂದೇ ಖ್ಯಾತಿ ಪಡೆದಿರುವ ಇಲ್ಲಿ, ಒಟ್ಟಾರೆ 150 ಜೋಡಿ ಅವಳಿಗಳಿದ್ದಾರೆ. ಈ ಪೈಕಿ ಬರೊಬ್ಬರಿ 55  ಅವಳಿಗಳಿಗೆ ಮತದಾನದ ಹಕ್ಕು ಇದೆ. ಇಷ್ಟೂ ಜೋಡಿ ಅವಳಿಗಳನ್ನು ಗುರುತಿಸುವ ತಲೆಬಿಸಿಯ ಕೆಲಸ ಎಂದಿನ ಚುನಾವಣೆಯಂತೆ ಮೇ.12 ರಂದು ಅಧಿಕಾರಿಗಳದ್ದಾಗಿತ್ತು 
ಕೆಲವು ಜನರು ತಮಾಷೆ ಮಾಡುತ್ತಿದ್ದಾರೆ, ಬೇರೆ ಗುರುತಿನ ಚೀಟಿ ಹಿಡಿದುಕೊಂಡು ಅದೇ ವ್ಯಕ್ತಿ ಮತ್ತೊಮ್ಮೆ ಮತದಾನ ಮಾಡಲು ಬರುತ್ತಿದ್ದಾರೆ ಎಂದುಕೊಂಡಿದ್ದೆವು, ಆ ನಂತರ ನಮಗೆ ಇದು ಅವಳಿಗಳಿರುವ ಗ್ರಾಮ ಎಂಬುದು ತಿಳಿಯಿತು. ಅವಳಿಗಳ ನಡುವೆ ಗುರುತು ಪತ್ತೆ ಮಾಡುವುದು ನಮಗೆ ಸವಾಲಿನ ಕೆಲಸವಾಗಿತ್ತು ಎಂದು ಮತಗಟ್ಟೆಯ ಅಧಿಕಾರಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಪೈಕಿ ಗುಡ್ಡು ಚೋಟಾ ಗುಡ್ಡು ಎಂಬ ಇಬ್ಬರು ಅವಳಿಗಳು ತಮ್ಮ ಗುರುತುಗಳನ್ನು ಹೇಳದೇ ಚುನಾವಣಾ ಅಧಿಕಾರಿಗಳಿಗೆ ತಲೆ ನೋವು ನೀಡಿದ್ದಾರೆ. " ಚುನಾವಣಾ ಅಧಿಕಾರಿಗಳು ಗುರುತನ್ನು ಪತ್ತೆ ಮಾಡುವುದಕ್ಕೆ ಹರಸಾಹಸಪಡುವುದನ್ನು ಕಂಡಿದ್ದೇವೆ, ತಮಾಷೆಗಾಗಿ ಈ ಬಾರಿ ನಮ್ಮ ಗುರುತುಗಳನ್ನು ಹೇಳದೆಯೇ ಹಾಗೆ ನಿಂತಿದ್ದೆವು. ನಂತರ ಗ್ರಾಮದ ಹಿರಿಯರೊಬ್ಬರು ಬಂದು ಗುರುತುಪತ್ತೆ ಮಾಡಿದರು ಎಂದು ಬಡಾ ಗುಡ್ಡು ಹೇಳಿದ್ದಾರೆ. 
ಕೆಲವೊಮ್ಮೆ ಅವಳಿಗಳು ಅದಲುಬದಲಾಗಿ ಮತಚಲಾವಣೆ ಮಾಡಿರುವ ಉದಾಹರಣೆಯೂ ಇದೆ. ಕೆಲವೊಮ್ಮೆ ಮತದಾನ ಮಾಡಿರುವ ಗುರುತನ್ನು ತಕ್ಷಣವೇ ತೆಗೆದುಹಾಕಿ ತನ್ನ ಅವಳಿ ಸಹೋದರನ ಪರವಾಗಿ ಮತಚಲಾವಣೆ ಮಾಡಿರುವ ವ್ಯಕ್ತಿಗಳೂ ಇದ್ದಾರೆ ಎಂದು ಗ್ರಾಮದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ. 
SCROLL FOR NEXT