ಅಮೃತಸರ್: ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ಪಂಜಾಬ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಈ ಲೋಕಸಭೆ ಚುನಾವಣೆಯ ವೇಳೆ ಸರಿಸುಮಾರು 80 ರ್ಯಾಲಿಗಳಲ್ಲಿ ಭಾಗವಹಿಸಿದ್ದು ಇದು ಅವರ ವೈಯುಕ್ತಿಕ ಆರೋಗ್ಯ,ಕಾಳಜಿಗಾಗಿ ಸಮಯವೇ ಸಿಗದಂತೆ ಮಾಡಿದೆ ಇದರಿಂದ ಅವರ ಧ್ವನಿ ಪೆಟ್ಟಿಗೆ ಮೇಲೆ ದೊಡ್ಡ ಪ್ರಮಾಣದ ದುಷ್ಪರಿಣಾಮವಾಗಿದೆ.
ಸಿಧು ತಾವು ಮಾತ್ರೆ, ಔಷಧಿ ಹಾಗೂ ಚುಚ್ಚುಮದ್ದುಗಳ ಮೇಲೆ ಅವಲಂಬಿತರಾಗಿದ್ದಾರೆ."ಪಂಜಾಬ್ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಅವರು 28 ದಿನಗಳಲ್ಲಿ 80 ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರದಾದ್ಯಂತ ಪ್ರಚಾರ ಮಾಡಿದ್ದಾರೆ.ಇದರಿಂದ ಅವರ ಧ್ವನಿ ಪೆಟ್ಟಿಗೆಗೆ ಹಾನಿಯಾಗಿದೆ." ಅಧಿಕೃತ ಪ್ರಕಟಣೆ ಹೇಳಿದೆ.
"ಚಂಡೀಘರ್ ನಲ್ಲಿ ಭಾನುವಾರ ಬೆಳಿಗ್ಗೆ ಸಿಧು ವೈದ್ಯರನ್ನು ಸಂಪರ್ಕಿಸಿದ್ದು ಅವರು ಹಾನಿಯಾಗಿರುವ ಗಂಟಲ ಮೇಲೆ ಮುಲಾಮು ಲೇಪನಕ್ಕಾಗಿ ಸಲಹೆ ಮಾಡಿದ್ದಾರೆ. ಅಲ್ಲದೆ ನಾಲ್ಕು ದಿನಗಳ ಕಾಲ ಗಂಟಲು ಉರಿಯೂತಕ್ಕಾಗಿ ಚಿಚ್ಚುಮದ್ದನ್ನು ತೆಗೆದುಕೊಳ್ಳಲು ಹೇಳಲಾಗಿದೆ.ಅಷ್ಟೇ ಅಲ್ಲದೆ ಇಂತಹಾ ಔಷಧಿ ತೆಗೆದುಕೊಳ್ಳುವ ವೇಳೆ ಹೆಚ್ಚು ಮಾತನಾಡಬಾರದು, 48 ಗಂಟೆಗಳ ಸಂಪೂರ್ಣ ವಿಶ್ರಾಂತಿ, ಬೇಕಿದೆ" ಎಂದೂ ವೈದ್ಯರು ಸಲಹೆ ನೀಡಿದ್ದಾರೆ.
ಆದರೆ ಲೋಕಸಭೆ ಚುನವಣೆ ಅಂತಿಮ ಹಂತ ತಲುಪಿರುವ ವೇಳೆ ತಾವು ಪ್ರಚಾರದಲ್ಲಿ ಭಾಗವಹಿಸುವುದು ಅನಿವಾರ್ಯ ಎಂದು ಸಿಧು ಹೇಳಿದ್ದಾರೆ.