ದೇಶ

ಲೋಕಸಭೆ ಚುನಾವಣೆಯಲ್ಲಿ ಎಎಪಿಯೊಂದಿಗೆ ಮೈತ್ರಿಗೆ ಕಾಂಗ್ರೆಸ್ ನಕಾರ: ಕೇಜ್ರಿವಾಲ್

Raghavendra Adiga
ವಿಶಾಂಖಪಟ್ಟಣಂ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಗೆ ನಿರಾಕರಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ. 
ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಡನೆ ಮಾತನಾಡಿರುವ ಕೇಜ್ರಿವಾಲ್ ತಾವು ಇತ್ತೀಚೆಗೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದು ಗಾಂಧಿ ಎಎಪಿಯೊಂದಿಗೆ ಕೈಜೋಡಿಸಲು ನಿರಾಕರಿಸಿದರು ಎಂದಿದ್ದಾರೆ.
ಕಾಂಗ್ರೆಸ್ ನ ದೆಹಲಿ ಘಟಕ ಅಧ್ಯಕ್ಷ ಶೀಲಾ ದೀಕ್ಷಿತ್  ಈ ಹಿಂದೆ ಎಎಪಿ ತಮ್ಮೊಡನೆ ಮೈತ್ರಿಗಾಗಿ ಕಾಂಗ್ರೆಸ್ ನಾಯಕರನ್ನೆಂದಿಗೂ ಸಂಪರ್ಕಿಸಿಲ್ಲ ಎಂದು ಹೇಳಿಕೆ ನಿಡಿದ್ದರು. ಆದರೆ ಕೇಜ್ರಿವಾಲ್ ತಾವು ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದಾಗಿ ಹೇಳಿದ್ದಲ್ಲದೆ ರಾಹುಲ್ ಮೈತ್ರಿಗೆ ಸಮ್ಮತಿಸಲಿಲ್ಲ ಎಂದಿದ್ದಾರೆ. ಇದೇ ವೇಳೆ ಶೀಲಾ ದೀಕ್ಷಿತ್ ಹೇಳಿಕೆ ಕುರಿತು ಮಾತನಾಡಿ ಅವರು ದೊಡ್ಡ ನಾಯಕಿಯಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಮಾಡಲು ಕಾಂಗ್ರೆಸ್ ಎಎಪಿ ಜತೆ ಮೈತ್ರಿ ಮಾಡಿಕೊಳ್ಳಬೇಕೆಂದು ಕೇಜ್ರಿವಾಲ್ ಒತ್ತಾಯಿಸುತ್ತಾರೆ. ಆದರೆ ದೆಹಲಿಯ ಶೀಲಾ ದೀಕ್ಷಿತ್ ಮತ್ತು ಇತರೆ ಮೂವರು ಕಾರ್ಯಕಾರಿ ನಿರ್ದೇಶಕರು ಕಾಂಗ್ರೆಸ್-ಎಎಪಿ  ಮೈತ್ರಿಯನ್ನು ವಿರೋಧಿಸಿದ್ದಾರೆ.
ದೆಹಲಿಯಲ್ಲಿ ದೀರ್ಘಾವಧಿಯ ಹಿನ್ನಡೆಯನ್ನು ಪರಿಗಣಿಸಿ ಮೈತ್ರಿ ಅವಕಾಶಗಳಿಂದ ದೂರವಿರಲು ತೀರ್ಮಾನಿಸಿದ್ದಾಗಿ ಮೂಲಗಳು ಹೇಳಿದೆ. ಇದೇ ವೇಳೆ ಒಂದೊಮ್ಮೆ ಮೈತ್ರಿ ಮಾಡಿಕೊಂಡರೂ 2020ರಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಹಾಗೂ ಆ ವೇಳೆ ಕಾಂಗ್ರೆಸ್-ಎಎಪಿ   ಸೀಟು ಹಂಚಿಕೆ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಮೂಲಗಳು ವಿವರಿಸಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೆಹಲಿಯಲ್ಲಿ ಶೂನ್ಯ ಸಾಧನೆ ಮಾಡಿತ್ತು. ದೆಹಲಿ 7 ಲೋಕಸಭಾ ಸ್ಥಾನಗಳನ್ನುಹೊಂದಿದ್ದು ಮುಂದಿನ ಮೇ 12ರಂದು ಲೋಕಸಭೆ ಚುನವಣೆ ನಡೆಯಲಿದೆ.
SCROLL FOR NEXT