ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ 
ದೇಶ

ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ, ಗೃಹಿಣಿಯರಿಗೆ ಮಾತ್ರ ರಾಹುಲ್ ಮೇಲೆ ಪ್ರೀತಿ: ಐಎಎನ್ಎಸ್- ಸಿವೊಟರ್ ಸಮೀಕ್ಷೆ

ವಿಶಾಲ ಭಾರತೀಯ ಸಮಾಜದಲ್ಲಿ ಮುಂದಿನ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯವಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮಾತ್ರವೇ ಮೋದಿ ಹಾಗೂ ....

ನವದೆಹಲಿ: ವಿಶಾಲ ಭಾರತೀಯ ಸಮಾಜದಲ್ಲಿ ಮುಂದಿನ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯವಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮಾತ್ರವೇ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಅಂತರ ಅತ್ಯಂತ ಕಡಿಮೆಯಾಗಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಸಿವೊಟರ್-ಐಎನ್ಎಸ್ ಪೋಲ್ ಟ್ರ್ಯಾಕರ್  ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಶೇ. 63.6 ರಷ್ಟು ನಿರುದ್ಯೋಗಿ ಯುವಕರು ನರೇಂದ್ರ ಮೋದಿಯವರು ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಬೇಕೆಂದು ಹೇಳಿದ್ದಾರೆ. ಇದೇ ವರ್ಗದ ಕೇವಲ ಶೇ. 26ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಅಭಿಪ್ರಾಯಪಟ್ಟರು.
ಗೃಹಿಣಿಯರ ವರ್ಗದಲ್ಲಿ ಶೇ. 43.3 ಮಂದಿ ಮೋದಿ ಪ್ರಧಾನಿಯಾಗಿವುದನ್ನು ನೋಡಲು ಬಯಸಿದ್ದರೆ ಶೇ. 37.2 ರಷ್ಟು ಮಂದಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗಬೇಕೆಂದಿದ್ದಾರೆ. ಇತರೆ ವಿಭಾಗ, ವರ್ಗದ ಜನರಲ್ಲಿ ಹೋಲಿಸಿದರೆ ಗೃಹಿಣಿಯರ ವರ್ಗದಲ್ಲಿ ಮೋದಿಪರ ಒಲವಿರುವವರು ಅತ್ಯಂತ ವಿರಳವಾಗಿದ್ದಾರೆ.
ಸರ್ಕಾರಿ ಉದ್ಯೋಗಿಗಳು ಮೋದಿಯನ್ನು ಬಹುವಾಗಿ ಮೆಚ್ಚಿದ್ದು ಅತಿ ಹೆಚ್ಚು ಸಂಖ್ಯೆಯ ಸರ್ಕಾರಿ ಉದ್ಯೋಗಿಗಳು ಮೋದಿ ಮುಂದಿನ ಪ್ರಧಾನಿಯಾಗಬೇಕು ಎಂದಿದ್ದಾರೆ. ಶೇ.  61.1 ರಷ್ಟು ಸರ್ಕಾರಿ ನೌಕರರು ಮೋದಿಯೇ ಮುಂದಿನ ಪ್ರಧಾನಿಯಾಗಲಿ ಎಂದು ಬಯಸಿದರೆ ಕೇವಲ ಶೇ. 26ರಷ್ಟು ನೌಕರರು ಮಾತ್ರವೇ ರಾಹುಲ್ ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದು ಭಾವಿಸಿದ್ದಾರೆ.
ಗೃಹಿಣಿಯರ ಹೊರತಾಗಿ ಭೂಮಿರಹಿತ ಕೃಷಿ ಕಾರ್ಮಿಕರು, ಸಾಮಾನ್ಯ ಕಾರ್ಮಿಕ ವರ್ಗದಲ್ಲಿ ರಾಹುಲ್ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಆದರೆ ಇದು ಮೋದಿ ಅವರ ಪರವಾಗಿರುವವವ್ರ ಸಂಖ್ಯೆಗೆ ಸಮನಾಗುವುದಿಲ್ಲ.ಭೂರಹಿತ ಕೃಷಿ ಕಾರ್ಮಿಕ ವರ್ಗದ ಶೇ.35.4 ಮಂದಿ ರಾಹುಲ್ ಪರ ಒಲವು ತೋರಿದರೆ ಶೇ. 48.2 ಮತ್ತೆ ಮೋದಿಯನ್ನೇ ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ. ಸಾಮಾನ್ಯ ಕಾರ್ಮಿಕರ ವಲಯದ ಶೇ. 35 ಮಂದಿ ರಾಹುಲ್ ಪರವಾಗಿದ್ದರೆ ಶೇ.48.9 ಮಂದಿ ಮೋದಿ ಪರವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!