ದೇಶ

ಲೋಕಸಭೆ ಚುನಾವಣೆ: ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ

Lingaraj Badiger
ನವದೆಹಲಿ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಲೋಕಸಭೆ ಚುನಾವಣೆಗೆ ಶುಕ್ರವಾರ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಇಂದು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಖಿಲೇಶ್ ಯಾದವ್ ಅವರ, ಈ ಸಮಾಜದ ಪ್ರತಿಯೊಂದು ವಿಭಾಗಕ್ಕೂ ಇದು ಸಲ್ಲಲಿದೆ. ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ಭಾರಿ ಅಂತರವಿದೆ ಆದ್ದರಿಂದ ಭಾರತವನ್ನು ಸಮೃದ್ದಗೊಳಿಸುವುದು ನಮ್ಮ ಗುರಿ ಎಂದರು.
ಇದೇ ವೇಳೆ ಸಾಮಾಜಿಕ ನ್ಯಾಯದ ಕುರಿತಾಗಿ ಪ್ರಸ್ತಾಪಿಸಿದ ಅವರು ಅಭಿವೃದ್ದಿ ಕೆಲವೇ ಜನರ ಕೈಯಲ್ಲಿ ಸೀಮಿತವಾಗಿದೆ.ಸಾಮಾಜಿಕ ಅಂಕಿ ಅಂಶಗಳನ್ನು ಬಹಿರಂಗಪಡಿಸಬೇಕೆಂದು ಕೇಳಿಕೊಂಡರು. ಅಲ್ಲದೆ ಸಾಮಾಜಿಕ ನ್ಯಾಯವಿಲ್ಲದೆ ಅಭಿವೃದ್ದಿಯಾಗಲು ಸಾಧ್ಯವಿಲ್ಲ ಎಂದರು.
ಪ್ರಸ್ತಕ್ತ ಸರ್ಕಾರ ಅಭಿವೃದ್ದಿ ಬಗ್ಗೆ ಹೇಳುತ್ತಿದೆ, ಒಂದು ವೇಳೆ ನಿಜವಾಗಿಯೂ ಅಭಿವೃದ್ದಿ ಆದಲ್ಲಿ ನಿರುದ್ಯೋಗವಿರುತ್ತಿರಲಿಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ನಿರ್ಧಾರಕ್ಕೆ ಸಮಾಜವಾದಿ ಪಕ್ಷ ಬದ್ದವಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದರು.
ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿಕೂಟ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದು, ಬಿಜೆಪಿ ಕೋಟೆಗೆ ಲಗ್ಗೆ ಇಡಲು ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
SCROLL FOR NEXT