ದೇಶ

'ನ್ಯಾಯ್' ಯೋಜನೆಗೆ ಮಧ್ಯಮ ವರ್ಗದವರ ಮೇಲೆ ತೆರಿಗೆಯ ಹೊರೆ ಹಾಕುವುದಿಲ್ಲ: ರಾಹುಲ್ ಗಾಂಧಿ

Sumana Upadhyaya
ಪುಣೆ: ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಆದಾಯದ ಮೇಲೆ ತೆರಿಗೆ ಹೆಚ್ಚಿಸದೆ, ಮಧ್ಯಮ ವರ್ಗದ ಜನರ ಮೇಲೆ ಹೊರೆ ಹಾಕದೆ ನ್ಯಾಯ್ ಕನಿಷ್ಠ ಆದಾಯ ಯೋಜನೆಯನ್ನು(ನ್ಯೂಂತಮ್ ಆಯ್ ಯೋಜನೆ) ಜಾರಿಗೆ ತರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದ 25 ಕೋಟಿ ಮಂದಿ ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ನ್ಯಾಯ್ ಯೋಜನೆಯನ್ನು ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈಗಾಗಲೇ ಘೋಷಿಸಿದೆ.
ನ್ಯಾಯ್ ಯೋಜನೆಯಡಿ ಬಡವರಿಗೆ ಹಣ ನೀಡಲು ಮಧ್ಯಮ ವರ್ಗದವರಿಂದ ಕಿತ್ತುಕೊಳ್ಳುವುದಿಲ್ಲ ಅಥವಾ ಜನರ ಮೇಲೆ ತೆರಿಗೆಯ ಹೊರೆ ಹೊರಿಸುವುದಿಲ್ಲ ಎಂದು ಹೇಳಿದ್ದಾರೆ. ಪುಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ.
ರೈತರು, ಬಡವರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರ ಅಭಿಪ್ರಾಯ ಪಡೆದು ಕಾಂಗ್ರೆಸ್ ಪ್ರಣಾಳಿಕೆಯನ್ನು ಸಿದ್ದಪಡಿಸಿದೆ. ಎಲ್ಲಾ ಉದ್ಯಮಿಗಳು, ಷೇರುದಾರರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ವಿದ್ಯಾರ್ಥಿಗಳ ಸಂದೇಹಕ್ಕೆ ರಾಹುಲ್ ಗಾಂಧಿ ಉತ್ತರಿಸಿದರು.
SCROLL FOR NEXT