ದೇಶ

ಗಡಿಯಿಂದಲೇ ಹಕ್ಕು ಚಲಾಯಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾದ ಯೋಧರು!

Srinivasamurthy VN
ಶ್ರೀನಗರ: ಹಾಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಈ ಬಾರಿ ಭಾರತೀಯ ಸೇನೆ ಸೈನಿಕರು ಗಡಿಯಿಂದಲೇ ತಮ್ಮ ತಮ್ಮ ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದರು.
ಹೌದು.. ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಲಕ್ಷಾಂತರ ಯೋಧರಿಗಾಗಿ ಚುನಾವಣಾ ಆಯೋಗ ವಿಶೇಷ ಮತದಾನ ವ್ಯವಸ್ಥೆ ಕಲ್ಪಿಸಿತ್ತು. ಅದರಂತೆ ಯೋಧರ ಕರ್ತ್ಯವ್ಯಕ್ಕೆ ಚ್ಯುತಿ ಬಾರದಂತೆ ಅವರು ಕೆಲಸ ಮಾಡುವ ಸ್ಥಳದಿಂದಲೇ ತಮ್ಮ ಕ್ಷೇತ್ರದ ಪರ ಮತದಾನ ಮಾಡುವ ಸೌಲಭ್ಯ ಕಲ್ಪಿಸಿತ್ತು. ಅದರಂತೆ ಯೋಧರು ಆನ್ ಲೈನ್ ಬ್ಯಾಲೆಟ್ ಪೇಪರ್ ಮೂಲಕ ಸಿಯಾಚಿನ್ ಸೇರಿದಂತೆ ಎಲ್ ಒಸಿ ಗಡಿಯ ವಿವಿಧ ಸೇನಾ ಕ್ಯಾಂಪ್ ಗಳಲ್ಲಿ ಮತದಾನ ಮಾಡಿದರು.
ಯೋಧರಿಗಾಗಿ ಚುನಾವಣಾ ಆಯೋಗ ಆನ್ ಲೈನ್ ನಲ್ಲಿ ವಿಶೇಷ ಬ್ಯಾಲೆಟ್ ಪೇಪರ್ ಅಪ್ಲೋಡ್ ಮಾಡಿತ್ತು. ಈ ಬ್ಯಾಲೆಟ್ ಪೇಪರ್ ಗಳನ್ನು ಯೋದರು ತಾವಿರುವ ಸ್ಳಳದಿಂದಲೇ ಇಂಟರ್ನೆಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ತಮ್ಮ ಬೇಕಾದ ಅಭ್ಯರ್ಥಿಯ ಗುರುತಿಗೆ ಮತ ಹಾಕಿ ಆ ಬ್ಯಾಲೆಟ್ ಪೇಪರ್ ಗಳನ್ನು ಸಮೀಪದ ಆರ್ಮಿ ಕ್ಯಾಂಪ್ ನಲ್ಲಿ ನಿರ್ಮಿಸಲಾಗಿದ್ದ ಚುನಾವಣಾ ಆಯೋಗದ ಕಲೆಕ್ಟಿಂಗ್ ಪಾಯಿಂಟ್ ಗಳಿಗೆ ತಲುಪಿಸಿದರು. ಆ ಮೂಲಕ ಯೋಧರು ತಮ್ಮ ಹಕ್ಕು ಚಲಾಯಿಸಿ ಖುಷಿ ಪಟ್ಟರು.
SCROLL FOR NEXT