ದೇಶ

ತಮಿಳುನಾಡು:ಐಟಿ, ಚುನಾವಣಾ ಆಯೋಗದ ದಾಳಿಯಲ್ಲಿ 134.41 ಕೋಟಿ ನಗದು ವಶ

Nagaraja AB

ಚೆನ್ನೈ:ತಮಿಳುನಾಡಿನಾದ್ಯಂತ ಗುರುವಾರದಿಂದ ನಡೆದ ದಾಳಿ ವೇಳೆಯಲ್ಲಿ 135.41 ಕೋಟಿ ರೂಪಾಯಿಯನ್ನು ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿವೆ ಎಂದು ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಸತ್ಯಬ್ರಾತ ಸಾಹು ತಿಳಿಸಿದ್ದಾರೆ.

ವಿವಿಧೆಡೆ ನಡೆಸಿದ ದಾಳಿ ವೇಳೆಯಲ್ಲಿ 1022 ಕಿಲೋ ಗ್ರಾಂ ಚಿನ್ನ, 645 ಕಿಲೋ ಗ್ರಾಂ ಬೆಳ್ಳಿ ಸೇರಿದಂತೆ ಸುಮಾರು 294.38 ಕೋಟಿ ರೂಪಾಯಿ ಮೊತ್ತದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ  ಎಂದು ಅವರು ಹೇಳಿದ್ದಾರೆ.

ಸೀರೆಗಳು, ಬಟ್ಟೆಗಳು, ಕುಕ್ಕರ್ ಮತ್ತಿತರ ಚಿಕ್ಕಪುಟ್ಟ ವಸ್ತುಗಳು ಹಾಗೂ 8.15 ಕೋಟಿ ಮೊತ್ತದ ಗಿಫ್ಟ್ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.37.42 ಲಕ್ಷ ಮೊತ್ತದ ಮದ್ಯ ಹಾಗೂ 37.68ಲಕ್ಷ ಮೊತ್ತದ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ.ಈವರೆಗೂ ಸುಮಾರು 4 ಸಾವಿರದ 525  ಚುನಾವಣಾ ನೀತಿ ಸಂಹಿತೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಏಪ್ರಿಲ್ 18 ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT