ದೇಶ

ರಾಹುಲ್ ಗಾಂಧಿ ಪೌರತ್ವ, ಶಿಕ್ಷಣ ಪ್ರಶ್ನಿಸಿದ ಬಿಜೆಪಿ

Lingaraj Badiger
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಪೌರತ್ವ ಹಾಗೂ ಶಿಕ್ಷಣದ ಬಗ್ಗೆ ಪ್ರಶ್ನಿಸಿರುವ ಬಿಜೆಪಿ, ಅವರು ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಶನಿವಾರ ಒತ್ತಾಯಿಸಿದೆ.
ರಾಹುಲ್ ಗಾಂಧಿ ಅವರ ಶಿಕ್ಷಣ ಮತ್ತು ಪೌರತ್ವಕ್ಕೆ ಸಂಬಂಧಿಸಿದಂತೆ ಅಮೇಥಿಯಲ್ಲಿ ಅವರ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಅವರು,  ಇದೊಂದು ಗಂಭೀರವಾದ ಆಪಾದನೆಯಾಗಿದ್ದು, ರಾಹುಲ್‌ ನಿಜವಾಗಿಯೂ ಭಾರತೀಯರೇ ಅಥವಾ ಇಂಗ್ಲೆಂಡ್‌ ನಾಗರಿಕರೇ? ಈ ಕುರಿತು ಇರುವ ಸತ್ಯಾಂಶವನ್ನು ಅವರು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ನಾಮಪತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತು ಅವರ ವಕೀಲ ರಾಹುಲ್ ಕೌಶಿಕ್ ಅವರಿಗೆ ಪೌರತ್ವ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಇದು ಇಡೀ ದೇಶಕ್ಕೆ ಅಚ್ಚರಿ ಮೂಡಿಸಿದ್ದು, ರಾಹುಲ್ ಅವರ ವಕೀಲರ ಬಳಿ ಆಕ್ಷೇಪಗಳಿಗೆ ಉತ್ತರವಿಲ್ಲವೇ? ಎಂದು ರಾವ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರದ ಜತೆಗೆ ಸಲ್ಲಿಕೆಯಾಗಿರುವ ದಾಖಲೆಗಳಲ್ಲಿ ಕೆಲ ತಪ್ಪು ಮಾಹಿತಿ ಇದೆ ಎಂದು ಅಮೇಥಿ ಪಕ್ಷೇತರ ಅಭ್ಯರ್ಥಿ ದೂರು ನೀಡಿದ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆ ಕಾರ್ಯವನ್ನು ಏಪ್ರಿಲ್ 22ಕ್ಕೆ ಮುಂದೂಡುವಂತೆ ಅಮೇಠಿಯ ಚುನಾವಣಾಧಿಕಾರಿ ರಾಮ್ ಮನೋಹರ್ ಮಿಶ್ರಾ ಆದೇಶಿಸಿದ್ದಾರೆ. 
SCROLL FOR NEXT