ದೇಶ

ಮೋದಿ ಬದಲು ರಾಹುಲ್ ಪ್ರಧಾನಿ ಆಗ್ಬೇಕು ಅಂತಿದ್ದಾರೆ ಈ ನಾಲ್ಕು ರಾಜ್ಯಗಳ ಜನತೆ!

Srinivas Rao BV
ನವದೆಹಲಿ: 'ಪ್ರಧಾನಿ ಹುದ್ದೆಗೆ' ನಾಲ್ಕು ರಾಜ್ಯಗಳ ಜನರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದಾರೆ. 
ದೇಶದ ಬಹುತೇಕ ರಾಜ್ಯಗಳ ಜನತೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಅಭಿಪ್ರಾಯ ಹೊಂದಿದ್ದರೆ, ಸಿ-ವೋಟರ್-ಐಎಎನ್ಎಸ್ ನಡೆಸಿರುವ ಸಮೀಕ್ಷೆಯಲ್ಲಿ ನಾಲ್ಕು ರಾಜ್ಯಗಳ ಜನತೆ ಮಾತ್ರ ಪ್ರಧಾನಿ ಹುದ್ದೆಗೆ ಮೋದಿಯ ಬದಲು ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿದ್ದಾರೆ. 
ಏ.19 ರಂದು ನಡೆದ ಸಮೀಕ್ಷೆಯಲ್ಲಿ ಒಂದು ವೇಳೆ ಪ್ರಧಾನಿಯನ್ನು ನೇರವಾಗಿ ಆಯ್ಕೆ ಮಾಡುವ ಹಾಗಿದ್ದರೆ ಯಾರಿಗೆ ಮತ ನೀಡುತ್ತೀರಿ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಆಂಧ್ರಪ್ರದೇಶ, ಪಂಜಾಬ್, ಕೇರಳ, ತಮಿಳುನಾಡಿನ ಜನತೆ ಪ್ರಧಾನಿ ಹುದ್ದೆಗೆ ಮೋದಿ ಬದಲು ರಾಹುಲ್  ಬೆಸ್ಟ್ ಎಂದಿದ್ದಾರೆ. 
ಕೇರಳದಲ್ಲಿ ಶೇ.64.96 ರಷ್ಟು ಮತದಾರರು ರಾಹುಲ್ ಪರವಾಗಿದ್ದರೆ ಶೇ.23.97 ರಷ್ಟು ಮತದಾರರು ಮೋದಿ ಪರ ಒಲವು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.60.91 ರಷ್ಟು ರಾಹುಲ್ ಗಾಂಧಿ ಪರವಾಗಿದ್ದರೆ ಶೇ.26.93 ರಷ್ಟು ಮಂದಿ ಮೋದಿ ಪ್ರಧಾನಿಯಾಗಬೇಕೆಂಬ ಅಭಿಪ್ರಾಯ ಹೊಂಡಿದ್ದಾರೆ. ಪಂಜಾಬ್ ನಲ್ಲಿ ಸಮೀಕ್ಷೆಗೆ ಉತ್ತರಿಸಿರುವವರ ಪೈಕಿ ಶೇ.37 ರಷ್ಟು  ಮಂದಿ ರಾಹುಲ್ ಗಾಂಧಿ ಪರವಾಗಿದ್ದರೆ ಮೋದಿ ಪರ ಶೇ.36.05 ರಷ್ಟು ಜನರ ವಿಶ್ವಾಸವಿದೆ. 
ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆನ್ನುತ್ತಿರುವ ರಾಜ್ಯಗಳು ಬಿಜೆಪಿಯೇತರ ಪಕ್ಷಗಳು ಆಡಳಿತವಿರುವ  ರಾಜ್ಯಗಳಾಗಿವೆ. 
SCROLL FOR NEXT