ದೇಶ

ಲೋಕಸಭಾ ಚುನಾವಣೆ 2019, 4ನೇ ಹಂತ: 210 ಅಭ್ಯರ್ಥಿಗಳದು ಕ್ರಿಮಿನಲ್ ಹಿನ್ನೆಲೆ!

Srinivas Rao BV
ನವದೆಹಲಿ: ಲೋಕಸಭಾ ಚುನಾವಣೆ 2019 ರ 4 ನೇ ಹಂತದ ಮತದಾನ ಏ.29 ಕ್ಕೆ ನಡೆಯಲಿದ್ದು, ಒಟ್ಟಾರೆ ಕಣದಲ್ಲಿರುವ 928 ಅಭ್ಯರ್ಥಿಗಳ ಪೈಕಿ 210 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. 
ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಡಾಟಾ ಪ್ರಕಾರ 158 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿದ್ದರೆ. 210 ಅಭ್ಯರ್ಥಿಗಳ ವಿರುದ್ಧ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. 
12 ಅಭ್ಯರ್ಥಿಗಳು ತಮ್ಮ ವಿರುದ್ಧದ ಆರೋಪ ಸಾಬೀತಾಗಿದೆ ಎಂಬ ಮಾಹಿತಿ ನೀಡಿದ್ದರೆ, 5 ಅಭ್ಯರ್ಥಿಗಳು ಕೊಲೆಗೆ ಸಂಬಂಧಪಟ್ಟ ಪ್ರಕರಣ ತಮ್ಮ ವಿರುದ್ಧ ದಾಖಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. 24 ಅಭ್ಯರ್ಥಿಗಳು ಕೊಲೆ ಯತ್ನದ ಪ್ರಕರಣ ಎದುರಿಸುತ್ತಿದ್ದರೆ 21 ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಸಿರುವ ಪ್ರಕರಣವನ್ನು ಎದುರಿಸುತ್ತಿದ್ದಾರೆ. 16 ಅಭ್ಯರ್ಥಿಗಳ ವಿರುದ್ಧ ದ್ವೇಷ ಭಾಷಣ ಮಾಡಿರುವ ಪ್ರಕರಣ ದಾಖಲಾಗಿದೆ. 
ಬಿಜೆಪಿಯ 57 ಅಭ್ಯರ್ಥಿಗಳ ಪೈಕಿ 25 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೆ 57 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಎಸ್ ಪಿಯ 54 ಅಭ್ಯರ್ಥಿಗಳ ಪೈಕಿ 11 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ, 345 ಪಕ್ಷೇತರ ಅಭ್ಯರ್ಥಿಗಳ ಪೈಕಿ 60 ಅಭ್ಯರ್ಥಿಗಳು ಪ್ರಕರಣ ಎದುರಿಸುತ್ತಿದ್ದಾರೆ. 
SCROLL FOR NEXT