ದೇಶ

ಟಿಎಂಸಿಯ 40 ಶಾಸಕರು ನನ್ನ ಸಂಪರ್ಕದಲ್ಲಿ, ಫಲಿತಾಂಶದ ನಂತರ ಅವರು ರಾಜೀನಾಮೆ: ದೀದಿಗೆ ಪ್ರಧಾನಿ ಮೋದಿ ಶಾಕ್

Nagaraja AB

ಶ್ರೀರಾಮಪುರ: ತೃಣಮೂಲ ಕಾಂಗ್ರೆಸ್ ಪಕ್ಷದ 40 ಶಾಸಕರನ್ನು ನನ್ನ ಸಂಪರ್ಕದಲ್ಲಿದ್ದಾರೆ. ಮತ್ತೊಮ್ಮೆ ಬಿಜೆಪಿ ಚುನಾವಣೆಯಲ್ಲಿ ಗೆದ್ದು ಬಂದರೆ ತೃಣ ಮೂಲ ಕಾಂಗ್ರೆಸ್  ಮರುಭೂಮಿಯಂತಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ತಮ್ಮ ಸಂಬಂಧಿಕರನ್ನು ರಾಜಕೀಯವಾಗಿ ಸ್ಥಾಪಿಸಲು ಮಮತಾ ಬ್ಯಾನರ್ಜಿ ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಮೋದಿ, ದೇಶದ ಪ್ರಧಾನಿಯಾಗಬೇಕೆಂಬ ಆಸೆ ಹೊತ್ತಿರುವ ಮಮತಾ ಬ್ಯಾನರ್ಜಿ ಅವರ ಕನಸು ನನಸಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ದೀದಿ ದೆಹಲಿಗೆ ತಲುಪಲು ಸಾಧ್ಯವಿಲ್ಲ, ದೆಹಲಿ ಬಹಳ ದೂರವಿದೆ. ಕೇವಲ ಕ್ಷಮೆಯಾಗಿ ದೆಹಲಿಗೆ ಹೋಗುತ್ತಾರೆ. ಅವರ  ಸಂಬಂಧಿಯನ್ನು ರಾಜಕೀಯವಾಗಿ ಸ್ಥಾಪಿಸುವುದು ಅವರ ಪ್ರಮುಖವಾದ ಹಿತಾಸಕ್ತಿಯಾಗಿದೆ ಎಂದರು. ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಡೈಮಂಡ್ ಹಾರ್ಬರೂ ಕ್ಷೇತ್ರದ ಹಾಲಿ ಸಂಸದರಾಗಿದ್ದು, ಟಿಎಂಸಿಯ  ಅಭ್ಯರ್ಥಿಯಾಗಿದ್ದಾರೆ

ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರದಾನಿ, ಸೋಲಿನ ಹತಾಶೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿವೆ. ಆಡಳಿತಾರೂಢ ಟಿಎಂಸಿ ಗೂಂಡಾಗಳು ಮತದಾರರು ತಮ್ಮ ಮತಗಳನ್ನು ಚಲಾಯಿಸದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.

SCROLL FOR NEXT