ದೇಶ

ಅಮಿತ್ ಶಾ ಗಾಂಧಿನಗರದಿಂದ ಸ್ಪರ್ಧೆ,ಅಡ್ವಾಣಿ ರಾಜಕೀಯ ನಿವೃತ್ತಿಗೆ ಒತ್ತಡ -ಶಿವಸೇನಾ

Nagaraja AB

ಮುಂಬೈ: ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಪ್ರತಿನಿಧಿಸುತ್ತಿರುವ ಗಾಂಧಿನಗರ ಕ್ಷೇತ್ರದ ಟಿಕೆಟ್ ನ್ನು ಅಮಿತ್ ಶಾರಿಗೆ ಘೋಷಿಸುವ ಮೂಲಕ ಭಾರತೀಯ ರಾಜಕಾರಣದಲ್ಲಿ  ಭೀಷ್ಮಾಚಾರ್ಯ ಎಂದೇ ಕರೆಯಲಾಗುತ್ತಿದ್ದ ಅಡ್ವಾಣಿ ಅವರನ್ನು ಬಲವಂತದಿಂದ ರಾಜಕೀಯ ನಿವೃತ್ತಿಗೊಳಿಸಲಾಗುತ್ತಿದೆ ಎಂದು ಶಿವಸೇನೆ ಕಿಡಿಕಾರಿದೆ.

91 ವರ್ಷದ ಅಡ್ವಾಣಿ ಆರು ಬಾರಿ ಗಾಂಧಿನಗರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಉಪ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಲ್ ಕೆ ಅಡ್ವಾಣಿ ಹೆಸರು ಇಲ್ಲದಿರುವುದು ಅನಿರೀಕ್ಷಿತವೇನಲ್ಲಾ, ಬಿಜೆಪಿಯಲ್ಲಿ ಅಡ್ವಾಣಿ ಯುಗ ಅಂತ್ಯಗೊಳ್ಳುತ್ತಾ ಬಂದಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಟೀಕಿಸಲಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾದ ನಂತರ  ಅಮಿತ್ ಶಾ ಅವರನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅಡ್ವಾಣಿ ಅವರನ್ನು ಮಾರ್ಗದರ್ಶಕ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಅಡ್ವಾಣಿ ಬಿಜೆಪಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, ಮಾಜಿ ಪ್ರಧಾನಿ  ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಪಕ್ಷದ ರಥವನ್ನು ಮುನ್ನಡೆಸಿದ್ದರು. ಆದರೆ, ಈಗ ಮೋದಿ ಮತ್ತು ಶಾ ಅವರ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಹಿರಿಯರು ಯಾವುದೇ ಹೊಣೆ ಹೊತ್ತುಕೊಳ್ಳಲಾಗದಂತಹ ಪರಿಸ್ಥಿತಿಯನ್ನು ಈಗಾಗಲೇ  ಸೃಷ್ಟಿಸಲಾಗಿದೆ ಎಂದು ಸಾಮ್ನಾದಲ್ಲಿ ಟೀಕಿಸಲಾಗಿದೆ.

SCROLL FOR NEXT