ದೇಶ

ಅಧಿಕಾರಕ್ಕೆ ಬಂದರೆ ಬಡವರಿಗೆ ವಾರ್ಷಿಕ 72 ಸಾವಿರ ರೂ.ಕನಿಷ್ಠ ಆದಾಯ-ರಾಹುಲ್ ಗಾಂಧಿ

Nagaraja AB

ನವದೆಹಲಿ: ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ  ರೈತರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸುವುದಾಗಿ ಪುನರುಚ್ಚರಿಸಿರುವ ಕಾಂಗ್ರೆಸ್‍ ಅಧ್ಯಕ್ಷ ರಾಹುಲ್‍ ಗಾಂಧಿ, ದೇಶದ ಶೇ.20ರಷ್ಟು ಅತಿ ಬಡ ಕುಟುಂಬಗಳ ಖಾತೆಯಲ್ಲಿ ವಾರ್ಷಿಕ 72 ಸಾವಿರ ರೂ. ಠೇವಣಿ ಇಡುವುದಾಗಿ ಭರವಸೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ ಅಧಿಕಾರಕ್ಕೆ ಬಂದಲ್ಲಿ, ಕನಿಷ್ಠ ಆದಾಯ ಖಾತರಿ ಯೋಜನೆಯಡಿ, ಅರ್ಹ ರೈತರಿಗೆ  ತಿಂಗಳಿಗೆ ಆರು ಸಾವಿರ ರೂಪಾಯಿಯಂತೆ ವಾರ್ಷಿಕ 72 ಸಾವಿರ ರೂ. ನೀಡುವುದಾಗಿ ತಿಳಿಸಿದರು.

ಇದೊಂದು ಕ್ರಾಂತಿಕಾರಿ ಯೋಜನೆಯಾಗಲಿದೆ ಎಂದ ಅವರು, ಇದರಿಂದ ದೇಶದ 5 ಕೋಟಿ ಕುಟುಂಬಗಳು ಹಾಗೂ 25 ಕೋಟಿ ಜನರು ನೇರ ಲಾಭ ಪಡೆಯಲಿದ್ದಾರೆ. ಇದರ ಪ್ರಕಾರ, ಪ್ರತಿ ತಿಂಗಳು ರೈತರ ಖಾತೆಗೆ 6 ಸಾವಿರ ರೂ. ಜಮೆಯಾಗಲಿದೆ ಎಂದರು.
ಇಂತಹ ಯೋಜನೆ ದೇಶದಲ್ಲಿ ಬೇರೆಲ್ಲೂ ಇಲ್ಲ.ಈ ಯೋಜನೆಯಿಂದ ದೇಶದ ಯಾವುದೇ ಬಡ ಜನರು ಉಪವಾಸ ಮಲಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಆರ್ಥಿಕವಾಗಿ ಹಿಂದುಳಿದ ಮಧ್ಯಮವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ಒದಗಿಸಿದ ಬೆನ್ನಲ್ಲೇ ಕಾಂಗ್ರೆಸ್‍ ಈ ಹೇಳಿಕೆ ನೀಡಿದೆ.
SCROLL FOR NEXT