ಕೆಪಿ ಪ್ರಕಾಶ್ ಬಾಬು 
ದೇಶ

ಶಬರಿಮಲೆ ಹಿಂಸಾಚಾರ: ಕೇರಳ ಬಿಜೆಪಿ ಅಭ್ಯರ್ಥಿಗೆ 14 ದಿನ ನ್ಯಾಯಾಂಗ ಬಂಧನ

ಕಳೆದ ವರ್ಷ ಶಬರಿಮಲೆ ದೇವಾಲಯಕ್ಕೆ ಮಹಿಳೆ ಪ್ರವೇಶ ವಿಚಾರದಲ್ಲಿ ಉಂಟಾದ ಗಲಭೆ ವೇಳೆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕೇರಳ ನ್ಯಾಯಾಲಯವು ಬಿಜೆಪಿ ಲೋಕಸಭೆ ಚುನಾವಣಾ ಅಭ್ಯರ್ಥಿ....

ತಿರುವನಂತಪುರಂ: ಕಳೆದ ವರ್ಷ ಶಬರಿಮಲೆ ದೇವಾಲಯಕ್ಕೆ ಮಹಿಳೆ ಪ್ರವೇಶ ವಿಚಾರದಲ್ಲಿ ಉಂಟಾದ ಗಲಭೆ ವೇಳೆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕೇರಳ ನ್ಯಾಯಾಲಯವು ಬಿಜೆಪಿ ಲೋಕಸಭೆ ಚುನಾವಣಾ ಅಭ್ಯರ್ಥಿಯೊಬ್ಬರಿಗೆ ಹದಿನಾಲ್ಕು ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಕೋಳಿಕ್ಕೋಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆಪಿ ಪ್ರಕಾಶ್ ಬಾಬು ಅವರಿಗೆ ಕೇರಳ ಪಟ್ಟಣಂತಿಟ್ಟ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ.
ಕೇರಳ ಬಿಜೆಪಿ ಯುವ ಮೋರ್ಛಾ ರಾಜ್ಯಾಧ್ಯಕ್ಷರಾಗಿರುವ ಬಾಬು ಅವರ ಜಾಮೀಊನು ಅರ್ಜಿ ತಿರಸ್ಕೃತಗೊಂಡಿದ್ದು ಅವರನ್ನು ಕೊಟ್ಟಾರಕ್ಕರ ಉಪ ಜೈಲಿಗೆ ಕಳುಹಿಸಲಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಶಬರಿಮಲೆಗೆ ಮಹಿಳೆ ಪ್ರವೇಶ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿದ್ದ ತಿರ್ಪಿನ ನಂತರ ನಡೆದ ಗಲಭೆಯಲ್ಲಿ ಆರೋಪಿ ಬಿಜೆಪಿ ಅಭ್ಯರ್ಥಿ ಬಾಬು ಮದ್ಯಮ ವಯಸ್ಕ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ಮುನ್ನ ಬಾಬು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಳ್ಳಿ ಹಾಕಿತ್ತು.
ಶಬರಿಮಲೆ ಹಿಂಸಾಚಾರಕ್ಕೆ ಸಂಬಂಧಿಸಿ ಇನ್ನೂ ಏಳು ಪ್ರಕರಣಗಳು ಬಾಬು ಅವರ ಮೇಲಿದೆ.ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೋಲೀಸರು ಅವರ ಜಾಮೀನು ಅರ್ಜಿ ತ್ತಿರಸ್ಕೃತಗೊಂಡ ಬಳಿಕ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ. 
ಲೋಕಾಸಭೆ ಚುನಾವಣೆ ಹತ್ತಿರದಲ್ಲಿರುವಾಗಲೇ ಕೇರಳ ಬಿಜೆಪಿ ಅಭ್ಯರ್ಥಿ ಜೈಲುಪಾಲಾಗಿರುವುದು್ಬಿಜೆಪಿ ಪಾಳಯಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಸಮೀಪಿಸಿದ್ದು ಏಪ್ರಿಲ್ 4 ಕಡೆಯ ದಿನವಾಗಿದೆ. ಬಾಬು ಅವರು ಇಂದು ಜಾಮೀನು ಪಡೆದುಕೊಂಡ ಬಳಿಕ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದರೆಂದು ಮಾದ್ಯಮಗಳು ವರದಿ ಮಾಡಿದೆ.
ಇದೇ ವೇಳೆ ಬಾಬು "ನಂಬಿಕೆಯನ್ನು ನಿರ್ಲಕ್ಷಿಸುವ ಯಾವುದೇ ಸರ್ಕಾರ ಉಳಿಯಲ್ಲ, ಜೈಲುವಾಸಕ್ಕೆ ನಾನು ಹೆದರಲ್ಲ, ನಾನು ಜೈಲಿನಿಂದಲೇ ಚುನಾವಣೆ ಎದುರಿಸುವೆ" ನ್ಯೂಸ್ 18 ಮಲೆಯಾಳಂ ಸುದ್ದಿವಾಹಿನಿಗೆ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

SCROLL FOR NEXT