ದೇಶ

ಪಕ್ಷಕ್ಕೆ ಅಗತ್ಯವಾಗಿದ್ದರೆ ಚುನಾವಣೆಗೆ ಸ್ಪರ್ಧಿಸುವೆ: ಪ್ರಿಯಾಂಕಾ ಗಾಂಧಿ

Raghavendra Adiga
ಲಖನೌ: ಪಕ್ಷ ಬಯಸಿದ್ದಾದರೆ ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ದ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. 
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಿಯಾಂಕಾ "ಪಕ್ಷಕ್ಕೆ ಅಗತ್ಯವಾಗಿದ್ದರೆ, ನಮ್ಮ ಪಕ್ಷ ನಾನು ಚುನಾವಣೆಗೆ ಸ್ಪರ್ಧಿಸಬೇಕೆಂದು ಬಯಸಿದರೆ ಆಗ ಸ್ಪರ್ಧಿಸುವುದು ಖಚಿತ" ಎಂದಿದ್ದಾರೆ.ಅಲ್ಲದೆ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ರಾಹುಲ್ ಗಾಂಧಿ ದೇಶದ ಪ್ರಧಾನಿ ಅಭ್ಯರ್ಥಿಯೆಂದೂ ಸಹ ಪ್ರಿಯಾಂಕಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಅಮೇಥಿಯಲ್ಲಿ ಚುನಾವಣೆ ಪ್ರಚಾರ ಕೈಗೊಂಡಿರುವ ಪ್ರಿಯಾಂಕಾ ಗಾಂಧಿ ಗುರುವಾರ ಇಲ್ಲಿಂದ ತಾಯಿ ಸೋನಿಯಾ ಗಾಂಧಿ ಕ್ಷೇತ್ರವಾದ ರಾಯ್ ಬರೇಲಿಗೆ ತೆರಳಲಿದ್ದಾರೆ. 
ಜನವರಿಯಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿರುವ ಪ್ರಿಯಾಂಕಾ ಇದೇ ಮೊದಲ ಬಾರಿಗೆ ಚುನವಣೆಗೆ ಸ್ಪರ್ಧಿಸುವ ಹೇಳಿಕೆ ನಿಡಿದ್ದು ಪ್ರಿಯಾಂಕಾ ಹೇಳೀಕೆ ಮೈತ್ರಿ ಪಕ್ಷದಲ್ಲಿ ಭಾರೀ ಸಂಚಲನ ಸೃಷ್ಟಿಸುವ ಸಾಧ್ಯತೆಗಳಿದೆ.
SCROLL FOR NEXT