ಮಾಯಾವತಿ-ಅಖಿಲೇಶ್ 
ದೇಶ

ಯುಪಿಯಲ್ಲಿ ಮಹಾಘಟಬಂಧನಕ್ಕೆ ಬಿಗ್ ಶಾಕ್; ಮೂರೇ ದಿನಕ್ಕೆ ಹೊರಬಿದ್ದ ನಿಷಾದ್ ಪಾರ್ಟಿ!

ಉತ್ತರಪ್ರದೇಶದಲ್ಲಿ ಮಹಾಘಟಬಂಧನ ರಚನೆ ಮೂಲಕ ಪ್ರಧಾನಿ ಮೋದಿಗೆ ತೀವ್ರ ಪೈಪೋಟಿ ನೀಡುವ ಯೋಜನೆಯಲ್ಲಿದ್ದ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮಹಾಘಟಬಂಧನಕ್ಕೆ ದೊಡ್ಡ ಶಾಕ್ ಎದುರಾಗಿದೆ.

ಲಖನೌ: ಉತ್ತರಪ್ರದೇಶದಲ್ಲಿ ಮಹಾಘಟಬಂಧನ ರಚನೆ ಮೂಲಕ ಪ್ರಧಾನಿ ಮೋದಿಗೆ ತೀವ್ರ ಪೈಪೋಟಿ ನೀಡುವ ಯೋಜನೆಯಲ್ಲಿದ್ದ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮಹಾಘಟಬಂಧನಕ್ಕೆ ದೊಡ್ಡ ಶಾಕ್ ಎದುರಾಗಿದ್ದು ಮೂರನೇ ದಿನಕ್ಕೆ ನಿಷಾದ್ ಪಾರ್ಟಿ ಮೈತ್ರಿಕೂಟದಿಂದ ಹೊರಬಿದ್ದಿದೆ.
ಲಖನೌನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಭೇಟಿ ಮಾಡಿದ ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್ ಮಹಾಘಟಬಂಧನದಿಂದ ಹೊರ ಬಂದಿರುವುದಾಗಿ ಘೋಷಿಸಿದ್ದಾರೆ.
ಸಮಾಜವಾದಿ ಪಕ್ಷಕ್ಕೂ ಮತ್ತು ನಿಷಾದಾ ಪಾರ್ಟಿಗೂ ಇನ್ನು ಯಾವುದೇ ಮೈತ್ರಿ ಇರುವುದಿಲ್ಲ. ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ನಿಷಾದ್ ಪಕ್ಷ ತನ್ನದೇ ಚಿಹ್ನೆಯಡಿ ಸ್ಪರ್ಧಿಸಲು ಬಯಸಿತ್ತು. ಆದರೆ ಸಮಾಜವಾದಿ ಪಕ್ಷ ಅದಕ್ಕೆ ಒಪ್ಪಲಿಲ್ಲ  ಎಂದು ನಿಷಾದ್ ಪಕ್ಷದ ಮಾಧ್ಯಮ ಉಸ್ತುವಾರಿ ನಿಕ್ಕಿ ನಿಷಾದ್ ಅಲಿಯಾಸ್ ರಿತೇಶ್ ನಿಷಾದ್ ಗೋರಖ್ ಪುರದಲ್ಲಿ ತಿಳಿಸಿದರು. 
ಸಂಜಯ್ ನಿಷಾದ್ ಪುತ್ರ ಪ್ರವೀಣ್ ನಿಶಾದ್ 2018ರ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಗೋರಖ್ ಪುರ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿದ್ದು ಅಲ್ಲಿಂದ ಎಸ್ ಪಿ ಅಭ್ಯರ್ಥಿಯಾಗಿ ನಿಷಾದ್ ಪುತ್ರಿ ಗೆದ್ದಿರುವುದು ಮಹತ್ವದ ಘಟನೆಯಾಗಿತ್ತು.
ನಿಷಾದ್ ಪಾರ್ಟಿ ಮಹಾಘಟಬಂಧನದಿಂದ ಹೊರಬರುತ್ತಿದ್ದಂತೆ ಸಮಾಜವಾದಿ ಪಕ್ಷದ ಗೋರಖಪುರ ಮತ್ತು ಕಾನ್ಪುರ್ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಗೋರಖಪುರದಿಂದ ರಾಮ್ಬುಯಾನ್ ನಿಷಾದ್ ಮತ್ತು ಕಾನ್ಪುರದಿಂದ ರಾಮ ಕುಮಾರ್ ರನ್ನು ಕಣಕ್ಕಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!