ಅಮಿತ್ ಶಾ 
ದೇಶ

ಪಾಕಿಸ್ತಾನದಲ್ಲಿ ಜೈ ಶ್ರೀ ರಾಮ್ ಮಂತ್ರ ಪಠಿಸಬೇಕಾ? ಅಮಿತ್ ಶಾ

ಭಾರತದಲ್ಲಿ ಶ್ರೀರಾಮ ಜಪ ಮಾಡಲು ಆಗುತ್ತಿಲ್ಲವೆಂದರೆ ಪಾಕಿಸ್ತಾನದಲ್ಲಿ ಪಠಿಸಬೇಕಾ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳ:  ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ ಮಂತ್ರ ಪಠಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಭಾರತದಲ್ಲಿ ಶ್ರೀರಾಮ ಜಪ ಮಾಡಲು ಆಗುತ್ತಿಲ್ಲವೆಂದರೆ ಪಾಕಿಸ್ತಾನದಲ್ಲಿ  ಪಠಿಸಬೇಕಾ ? ಎಂದು ಪ್ರಶ್ನಿಸಿದ್ದಾರೆ

ಪಶ್ಚಿಮ ಬಂಗಾಳದ ವಿವಿಧೆಡೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಜೈ ಶ್ರೀ ರಾಮ ಮಂತ್ರ ಪಠಿಸುತ್ತಿರುವ ತಮನ್ನು ಮಮತಾ ಬ್ಯಾನರ್ಜಿ ಬಂಧಿಸುವ ಭಯವಿದೆ ಎಂದು ಹೇಳಿದ್ದಾರೆ.

ಬಿಷ್ಣುಪುರ, ಘಾಟಲ್ ಮತ್ತಿತರ ಕಡೆಗಳಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಿದ ಅಮಿತ್ ಶಾ, ಶ್ರೀ  ರಾಮ ಭಾರತ ಸಂಸ್ಕೃತಿಯ ಭಾಗವಾಗಿದ್ದು, ಅವರ ಹೆಸರು ಹೇಳದಂತೆ ಜನರನ್ನು ಯಾರಾದರೂ ತಡೆಯುತ್ತಾರೆಯೇ ಎಂದು ಪ್ರಶ್ನಿಸಿದರು.
ಭಾರತದಲ್ಲಿ ಶ್ರೀರಾಮನ ಹೆಸರು ಹೇಳುವುದಕ್ಕೆ ಆಗುವುದಿಲ್ಲ ಎಂದರೆ ಪಾಕಿಸ್ತಾನದಲ್ಲಿ ಹೇಳುವುದಕ್ಕೆ ಆಗುತ್ತದೆಯಾ ಎಂದು ಮಮತಾ ಬ್ಯಾನರ್ಜಿ ಅವರನ್ನು ಕೇಳಲು ಇಷ್ಟಪಡುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಪಶ್ಚಿಮ ಬಂಗಾಳ: ದೇವಸ್ಥಾನ ಸಮೀಪದ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ: 7 ಯಾತ್ರಿಕರು ಸಜೀವ ದಹನ