ದೇಶ

ರಾಹುಲ್ ಗಾಂಧಿ-ಚಂದ್ರಬಾಬು ನಾಯ್ಡು ಭೇಟಿ: ಫಲಿತಾಂಶಕ್ಕೂ 2 ದಿನಗಳ ಮುನ್ನ ಪ್ರತಿಪಕ್ಷಗಳ ಸಭೆ

Srinivas Rao BV
ನವದೆಹಲಿ: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಬರುವುದಕ್ಕೂ 2 ದಿನಗಳ ಮುನ್ನ ಪ್ರತಿಪಕ್ಷಗಳ ಸಭೆ ಏರ್ಪಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. 
ಚುನಾವಣೋತ್ತರ ಮೈತ್ರಿ ರಚನೆ ಮಾಡುವುದಕ್ಕೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಟಿಎಂಸಿ ಪರ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಪಶ್ಚಿಮ ಬಂಗಾಳಕ್ಕೆ ತೆರಳುವುದಕ್ಕೂ ಮುನ್ನ ಚಂದ್ರಬಾಬು ನಾಯ್ಡು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. 
ರಾಹುಲ್ ಗಾಂಧಿ ಭೇಟಿ ವೇಳೆ ವಿವಿಪ್ಯಾಟ್ ವಿಷಯ, ಶೇಕಡಾವಾರು ಮತದಾನ, ಆಂಧ್ರ ವಿಧಾನಸಭೆ ಚುನಾವಣೆ ಬೆಳವಣಿಗೆಗಳ ಬಗ್ಗೆ ಮಾತನಾಡಿರುವುದಾಗಿ ನಾಯ್ಡು ತಿಳಿಸಿದ್ದಾರೆ. 
SCROLL FOR NEXT