ದೇಶ

ದೀದಿ ನನಗೆ ಕಪಾಳಮೋಕ್ಷ ಮಾಡಿದರೆ ಅದನ್ನು ಆಶೀರ್ವಾದ ಎನ್ನುತ್ತೇನೆ: ಪ್ರಧಾನಿ ಮೋದಿ

Lingaraj Badiger
ಪುರುಲಿಯಾ: ದೀದಿ ನನಗೆ ಕಪಾಳಮೋಕ್ಷ ಮಾಡಿದರೆ ನಾನು ಅದನ್ನು ಆರ್ಶೀವಾದ ಎಂದು ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಗುರುವಾರ ತಿರುಗೇಟು ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಇತ್ತೀಚಿಗಷ್ಟೇ ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವದ ಬಲವಾದ ಕಪಾಳಮೊಕ್ಷವಾಗಬೇಕು ಎಂದು ಹೇಳಿದ್ದರು. 
ಇಂದು ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ದೀದಿ ನನ್ನ ಕೆನ್ನೆಗೆ ಹೊಡೆಯಬೇಕು ಎಂದು ಹೇಳಿದ್ದಾರೆ. ಆದರೆ ಮಮತಾ ಅವರನ್ನು ನಾನು  ದೀದಿ ಎಂದು ಮಮತೆಯಿಂದ ಕರೆಯುತ್ತೇನೆ. ಗೌರವಿಸುತ್ತೇನೆ. ನಿಮ್ಮ ಹೊಡೆತ ನನಗೆ ಆಶೀರ್ವಾದವಿದ್ದಂತೆ ಎಂದು ತಿರುಗೇಟು ನೀಡಿದ್ದಾರೆ.
ಚಿಟ್​ಫಂಡ್ ಹಗರಣ​ಗಳ ಮೂಲಕ ಬಡವರ ಹಣ ಲೂಟಿ ಮಾಡಿದವರ ಕೆನ್ನೆಗೆ ಹೊಡೆಯುವ ಧೈರ್ಯ ನಿಮಗಿದೆಯೇ? ನಿಮಗೆ ತೋಲ್​ಬಾಜಿಯ (ಲೂಟಿ ಕೋರರು) ಕೆನ್ನೆಗೆ ಹೊಡೆಯುವ ಧೈರ್ಯ ನಿಮಗೆ ಇದೆಯೇ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ಎರಡು ದಿನಗಳ ಹಿಂದೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ನನಗೆ ಹಣ ಮುಖ್ಯವಲ್ಲ. ಹಾಗಾಗಿಯೇ ಮೋದಿ ಅವರು ಬಂಗಾಳಕ್ಕೆ ಬಂದು ನಮ್ಮ ಪಕ್ಷ ತೊಲ್​ಬಾಜ್​ ಎಂದು ಆರೋಪಿಸಿದ್ದಾರೆ. ಹೀಗಾಗಿ ಅವರ ಕೆನ್ನೆಗೆ ಪ್ರಜಾಪ್ರಭುತ್ವದ ಬಲವಾದ ಹೊಡೆತ ನೀಡಬೇಕು ಎನಿಸುತ್ತಿದೆ ಎಂದಿದ್ದರು.
SCROLL FOR NEXT