ದೇಶ

ಲೋಕಸಭಾ ಚುನಾವಣೆ: ಕಾಂಗ್ರೆಸ್ ಪಕ್ಷಕ್ಕೆ 44 ಸ್ಥಾನಕ್ಕಿಂತಲೂ ಕಡಿಮೆ ಸ್ಥಾನ - ನರೇಂದ್ರ ಮೋದಿ

Nagaraja AB

ರೊಹ್ಟಕ್:  ಈ ಬಾರಿ  ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ರಚಿಸುವ ಸಾಧ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದ್ದು,  ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಹರಿಯಾಣದಲ್ಲಿ ಪ್ರಚಾರದ ವೇಳೆಯಲ್ಲಿ  ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಜನರು ಸಿದ್ಧರಿಲ್ಲ. ಹಾಗಾಗೀ ಪ್ರಸ್ತುತ 44 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್  ಈಚುನಾವಣೆಯಲ್ಲಿ ಅದಕ್ಕಿಂತಲೂ ಕಡಿಮೆ ಸ್ಥಾನಕ್ಕೆ ತಳಲ್ಪಡುತ್ತದೆ ಎಂದರು.

ಬಿಜೆಪಿ ಬಹುಮತ ಗಳಿಸದಿದ್ದರೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರರಾವ್ ಅವರಿಂದ ಸರ್ಕಾರ ರಚಿಸುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಜನ ಹೇಳುತ್ತಿದ್ದಾರೆ. ಎನ್ ಡಿಎ ಮೈತ್ರಿಕೂಟ  ಸಂಪೂರ್ಣ ಬಹುಮತದೊಂದಿಗೆ ಸದೃಢ ಸರ್ಕಾರ ರಚಿಸಲಿದೆ ಎಂದು ಹೇಳಿದರು.

ಸೋಲುವ ಭೀತಿಯಲ್ಲಿ ಪ್ರತಿಪಕ್ಷಗಳು ಈಗಾಗಲೇ ಇವಿಎಂ, ಹಾಗೂ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿವೆ. ಮೊದಲ ಮೂರು ಹಂತಗಳ ಚುನಾವಣೆ ಕಂಡು ಅವರ ಕಾಲುಗಳು ನಡುಗಲು ಆರಂಭಿಸಿವೆ ಎಂದರು.
ಮತದಾರರು ತಮ್ಮಗೆ ಮತ ನೀಡಲು ಎಂಬುದು ಪ್ರತಿಪಕ್ಷಗಳಿಗೆ ಗೊತ್ತಾಗಿದೆ. ಚೆನ್ನಾಗಿ ಆಟ ಆಡದೆ ಪಂದ್ಯದಲ್ಲಿ ಸೋತವರು ಅಂಪೈರ್ ಗಳ ಮೇಲೆ ದೋಷ ಹೂರಿಸುತ್ತಾರೆ. ಅದೇ ರೀತಿಯಲ್ಲಿ ಪ್ರತಿಪಕ್ಷಗಳು ಅಂಪೈರುಗಳನ್ನು ದೂಷಿಸಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಟೀಕಿಸಿದರು.
SCROLL FOR NEXT