ದೇಶ

ಬಡವರದ್ದು ಯಾವ ಜಾತಿಯೋ ನಾನು ಅದಕ್ಕೆ ಸೇರಿದವನು: ಪ್ರಧಾನಿ ನರೇಂದ್ರ ಮೋದಿ

Srinivas Rao BV
ಲಖನೌ: ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಮೈತ್ರಿ ವಿರುದ್ಧ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. 
ಸಿಖ್ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡ ಅವರ ಆಗಿದ್ದಾಗೋಯ್ತು ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಹಿಂದಿನ ಮೈತ್ರಿ ಸರ್ಕಾರಗಳು ಗುಪ್ತಚರ ಇಲಾಖೆಗಳನ್ನು ದುರ್ಬಲಗೊಳಿಸಿದ್ದವು ಎಂದು ವಾಗ್ದಾಳಿ ನಡೆಸಿದ್ದಾರೆ. 
ಉತ್ತರ ಪ್ರದೇಶವನ್ನು ಹಾಳು ಮಾಡಿದ್ದಾರೆ. ಈಗ ಎಸ್ ಪಿ ಹಾಗೂ ಬಿಎಸ್ ಪಿ ಒಟ್ಟಿಗೆ ಸೇರಿಕೊಂಡು ತಮ್ಮನ್ನೇ ತಾವು ನಾಶಗೊಳಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ, ಎಸ್ ಪಿ-ಬಿಎಸ್ ಪಿ ಮೈತ್ರಿ ಮಹಾಮಿಲಾವಟಿ (ಮಹಾಕಲಬೆರಕೆ) ಎಂದು ಟೀಕಿಸಿದ್ದಾರೆ. 
ಇದೇ ವೇಳೆ ಮಾಯಾವತಿ ಅವರ ನಕಲಿ ಹಿಂದುಳಿದ ನಾಯಕ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ಮೋದಿ, ನಾನು ಒಂದೇ ಜಾತಿಗೆ ಸೇರಿದವನು ಬಡವರು ಯಾವ ಜಾತಿಗೆ ಸೇರುತ್ತಾರೋ ಅದೇ ಜಾತಿ ನನ್ನದು, ನಾನು ಬಡವರ ಜಾತಿಗೆ ಸೇರಿದವನು ಎಂದು ಹೇಳಿದ್ದಾರೆ. 
ಈ ಹಿಂದಿನ ಕಲಬೆರಕೆ ಸರ್ಕಾರಗಳು ನಮ್ಮ ಗುಪ್ತಚರ ಇಲಾಖೆಗಳನ್ನು ದುರ್ಬಲಗೊಳಿಸಿದ್ದವು, ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅದನ್ನು ಸರಿಪಡಿಸಿತ್ತು ಎಂದು ಮೋದಿ ಹೇಳಿದ್ದಾರೆ. 
SCROLL FOR NEXT