ದೇಶ

ಬಿಜೆಪಿ ಅಪಾಯಕಾರಿ ಅಂತಾ ಇಡೀ ವಿಶ್ವವೇ ಹೇಳುತ್ತಿದೆ- ಅಖಿಲೇಶ್ ಯಾದವ್

Nagaraja AB

ಲಖನೌ: ಪ್ರಜಾಪ್ರಭುತ್ವಕ್ಕೆ ಬಿಜೆಪಿ ಆಡಳಿತ ಅಪಾಯಕಾರಿ ಅಂತಾ ಇಡೀ ವಿಶ್ವವೇ ಹೇಳುತ್ತಿದೆ ಎಂದು ಸಮಾಜವಾದಿ ಪಕ್ಷದ  ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ಟೈಮ್  ಮ್ಯಾಗಜಿನ್ ಕವರ್ ಸ್ಟೋರಿ ಉಲ್ಲೇಖಿಸಿ ಮಾತನಾಡಿದ ಅಖಿಲೇಶ್ ಯಾದವ್ , ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬುದನ್ನು ವಿಶ್ವದ ಅತಿ ದೊಡ್ಡ ಮ್ಯಾಗಜಿನ್ ನಲ್ಲಿ ಬರೆಯಲಾಗಿದೆ. ಬಿಜೆಪಿಯವರು ಸಮಾಜವನ್ನು  ಹೊಡೆಯುತ್ತಿದ್ದಾರೆ ಎಂದರು.

ಬಿಜೆಪಿಯವರು ಅಚ್ಚೆದಿನ್ ಬಗ್ಗೆ ಮಾತನಾಡುತ್ತಾರೆ. ಆದರೆ, ಅಚ್ಚೆ ದಿನ್ ಬಂದಿಲ್ಲ.  ದ್ವೇಷ ಹಾಗೂ ಸುಳ್ಳಿನ ಆಧಾರದ ಮೇಲೆಯೇ ಬಿಜೆಪಿ ಸ್ಥಾಪನೆಯಾಗಿದ್ದು, ಮೈತ್ರಿ ಪಕ್ಷಗಳು ಅದನ್ನು ದೂಳಿಪಟ ಮಾಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋರಖ್ ಪುರದ ಮೈತ್ರಿ ಅಭ್ಯರ್ಥಿ ರಾಮ್ ಭೂವಲ್ ನಿಶಾದ್ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅಖಿಲೇಶ್ ಯಾದವ್,  ಐದು ಹಂತಗಳ ಚುನಾವಣೆಯಲ್ಲಿಯೇ ಉತ್ತರ ಪ್ರದೇಶ ಜನರು ಸ್ವಚ್ಛ ಭಾರತ ಅಭಿಯಾನ ಮೂಲಕ ಬಿಜೆಪಿಯನ್ನು ಓಡಿಸಿದ್ದಾರೆ ಎಂದು  ವ್ಯಂಗ್ಯವಾಡಿದರು.

ಗೋರಖ್ ಪುರದಲ್ಲಿ ಬಿಜೆಪಿ ಖಾತೆ ತೆರೆದಿರುವುದನ್ನು ನಾನು ನೋಡಿಲ್ಲ ಎಂದು ಅಖಿಲೇಶ್ ಯಾದವ್, ಕಳೆದ ಎರಡು ಮೂರು ತಿಂಗಳಲ್ಲಿ ಲಖನೌದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಹಲವೆಡೆ ಹಲವು ಮಂದಿ ಹೀಗೆ ಮೃತರಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದರ ಹೊಣೆ ಹೊರಬೇಕು. ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅಖಿಲೇಶ್ ಯಾದವ್ ಹೇಳಿದರು.

SCROLL FOR NEXT