ದೇಶ

ಲೋಕಸಭಾ ಚುನಾವಣೆ 2019: 6ನೇ ಹಂತದ ಮತದಾನ, 10 ಗಂಟೆ ವೇಳೆಗೆ 11.16ರಷ್ಟು ಮತದಾನ

Srinivasamurthy VN
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 6ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಬೆಳಗ್ಗೆ 10 ಗಂಟೆಯ ವೇಳೆಗೆ 11.16ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ದೇಶದ ಏಳು ರಾಜ್ಯಗಳ ಒಟ್ಟು 59 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಉತ್ತರ ಪ್ರದೇಶದಲ್ಲಿನ 14 ಕ್ಷೇತ್ರ, ಹರಿಯಾಣದ 10 ಕ್ಷೇತ್ರ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯ ಪ್ರದೇಶದ ತಲಾ 8 ಕ್ಷೇತ್ರ, ದೆಹಲಿಯ 7ಕ್ಷೇತ್ರ, ಮತ್ತು ಜಾರ್ಖಂಡ್‌ ನ 4 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಬೆಳಗ್ಗೆ 10 ಗಂಟೆಯ ವೇಳೆಗೆ 11.16ರಷ್ಟು ಮತದಾನವಾಗಿದ್ದು, ಈ ಪೈಕಿ ಬಿಹಾರದಲ್ಲಿ ಶೇ.9.03ರಷ್ಟು, ಹರ್ಯಾಣದಲ್ಲಿ ಶೇ,9.71ರಷ್ಟು, ಮಧ್ಯ ಪ್ರದೇಶದಲ್ಲಿ ಶೇ.13.53ರಷ್ಟು. ಉತ್ತರ ಪ್ರದೇಶದಲ್ಲಿ ಶೇ. 9.37ರಷ್ಟು ಪಶ್ಚಿಮ ಬಂಗಾಳದಲ್ಲಿ 17.42ರಷ್ಟು ಮತ್ತು ಜಾರ್ಖಂಡ್ ನಲ್ಲಿ 15.36ರಷ್ಟು ಮತದಾನವಾಗಿದೆ.
ಇನ್ನು ಕೇಂದ್ರ ಉತ್ತರ ದೆಹಲಿಯಲ್ಲಿ ಶೇ. 8.27ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
SCROLL FOR NEXT