ದೇಶ

ಮಳೆ ಬರುವಾಗ ವಿಮಾನಗಳು ರೇಡಾರ್ ಗೆ ಕಾಣಿಸುವುದಿಲ್ಲವೇ?: ಮೋದಿಗೆ ರಾಹುಲ್ ಟಾಂಗ್

Lingaraj Badiger
ನೀಮುಚ್: ಮೋಡ ಇದ್ದಾಗ ರೇಡಾರ್ ಕಣ್ತಪ್ಪಿಸಿ ದಾಳಿ ಮಾಡಬಹುದು ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಭಾರತದಲ್ಲಿ ಮಳೆ ಬರುವಾಗ ಎಲ್ಲಾ ವಿಮಾನಗಳು ರೇಡಾರ್ ಗೆ ಕಾಣಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇಂದು ಮಧ್ಯ ಪ್ರದೇಶದ ನೀಮುಚ್ ನಲ್ಲಿ ಕೊನೆ ಹಂತದ ಲೋಕಸಭೆ ಚುನಾವಣೆಯ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಜೀ ಅವರೇ ಭಾರತದಲ್ಲಿ ಮಳೆ ಬರುವ ಸಂದರ್ಭದಲ್ಲಿ ಎಲ್ಲಾ ವಿಮಾನಗಳು ರೇಡಾರ್ ಕಣ್ತಪ್ಪಿಸುತ್ತೇವೆಯೇ? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ನಿರುದ್ಯೋಗಿ ಯುವಕರಿಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ಅಧ್ಯಕ್ಷ, ನಮ್ಮ ಪಕ್ಷದ ಉದ್ದೇಶಿಸಿತ ನ್ಯಾಯ್ ಯೋಜನೆ ಭಾರತದ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಮತ್ತು ಜಿಎಸ್ ಟಿ ಹಾಗೂ ನೋಟ್ ನಿಷೇಧದಿಂದ ಅನ್ಯಾಯವಾಗಿರುವವರಿಗೆ ನ್ಯಾಯ ಸಿಗಲಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ನ್ಯೂಸ್ ನೇಷನ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಮೋಡಗಳು ಇರುವುದರಿಂದ ಪಾಕಿಸ್ತಾನದ ರೇಡಾರ್ ಗಳು ನಮ್ಮ ಯುದ್ಧ ವಿಮಾನಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ಆದೇಶಿಸಿದ್ದೆ ಎಂದು ಹೇಳಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟ್ರೋಲ್ ಆಗಿದೆ.
SCROLL FOR NEXT