ಕೊಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ವಿದ್ಯಾರ್ಥಿ ಹೋರಾಟಗಾರರ ನಡುವೆ ಘರ್ಷಣೆ ನಡೆದಿದೆ.
ಕಲ್ಕತ್ತಾ ವಿಶ್ವವಿದ್ಯಾನಿಲದ ಕಾಲೇಜ್ ಸ್ಟ್ರೀಟ್ ನಿಂದ ಅಮಿತ್ ಶಾ ರೋಡ್ ಶೋ ಸಾಗುತ್ತಿದ್ದಂತೆ ಉಭಯ ಪಕ್ಷಗಳ ಹೋರಾಟಗಾರರ ನಡುವೆ ಮಾತಿನ ಚಕಮಕಿ ಉಂಟಾಗಿ ನೂಕಾಟ, ತಳ್ಳಾಟ ನಡೆದಿದೆ.
ಸಂಜೆ 4-30 ರ ಸುಮಾರಿನಲ್ಲಿ ಆರಂಭವಾದ ಮೆರವಣಿಗೆ ಉತ್ತರ ಕೊಲ್ಕತ್ತಾದ ಸ್ವಾಮಿ ವಿವೇಕಾನಂದ ಮನೆಯವರೆಗೂ ಸಾಗಿತು.
ಗುಲಾಬಿ ಬಣ್ಣದ ಕೋಟ್ ಧರಿಸಿದ ಅಮಿತ್ ಶಾ ವಾಹನದಲ್ಲಿದ್ದರೆ ಅವರ ಸುತ್ತ ಅಸಂಖ್ಯಾತ ಪಕ್ಷದ ಕಾರ್ಯಕರ್ತರು, ಪಕ್ಷದ ಭಾವುಟಗಳು ರಾಜಾಜಿಸಿದವು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಕಲಾವಿದರಿಂದ ನೃತ್ಯವನ್ನು ಆಯೋಜಿಸಲಾಗಿತ್ತು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ