ದೇಶ

ಮೊಹಮ್ಮದ್ ಬಿನ್ ತುಘಲಕ್ ಜೊತೆಗೆ ಮೋದಿ ಹೋಲಿಸಿದ ಅಜಾದ್

Nagaraja AB

ನವದೆಹಲಿ: 14 ನೇ ಶತಮಾನದ ವಿವಾದಾತ್ಮಕ ದೆಹಲಿ ಸುಲ್ತಾನ ಮೊಹಮ್ಮದ್ ಬಿನ್ ತುಘಲಕ್ ಜೊತೆಗೆ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಹೋಲಿಸಿದ್ದಾರೆ.

2016ರಲ್ಲಿ ಮೋದಿ ಜಾರಿಗೆ ತಂದ ನೋಟ್ ಅಮಾನ್ಯತೆ ನೀತಿಯನ್ನು ಟೀಕಿಸಿರುವ ಅಜಾದ್, ಮೋದಿಯ ತುಘಲಕ್ ನೀತಿಯಿಂದಾಗಿ ಜನ ಸಾಮಾನ್ಯರು ತೀವ್ರ ತೊಂದರೆ ಎದುರಿಸುವಂತಾಯಿತು. 500 ರೂ. ಹಾಗೂ 1 ಸಾವಿರ ನೋಟುಗಳನ್ನು ಬದಲಾಯಿಸಿ ಹೊಸ ನೋಟುಗಳನ್ನು ತಂದಿರುವುದು ತುಘಲಕ್ ನಂತಿದೆ ಎಂದು ಸುದ್ದಿಗಾರರಿಗೆ ಹೇಳಿದರು.

14ನೇ ಶತಮಾನದ ದೆಹಲಿ ಸುಲ್ತಾನ ಮೊಹಮ್ಮದ್ ತುಘಲಕ್  ರಾಜಧಾನಿಯನ್ನು  ದೆಹಲಿಯಿಂದ ದೌಲತಾಬಾದ್ ಗೆ ಹಾಗೂ ದೌಲತಾಬಾದ್ ನಿಂದ ದೆಹಲಿಗೆ ಬದಲಾಯಿಸುವ ಮೂಲಕ ವಿವಾದತೀತನಾಗಿ ಪ್ರಸಿದ್ಧನಾಗಿದ್ದ.ಇದೇ ರೀತಿಯಲ್ಲಿ ಮೋದಿ ಆರ್ ಬಿ ಗೌರ್ವನರ್, ಸಂಪುಟದ ಒಪ್ಪಿಗೆ ಪಡೆಯದೆ ನೋಟ್ ಅಮಾನ್ಯತೆ ನಿರ್ಧಾರ ತೆಗೆದುಕೊಂಡಿದ್ದರು ಎಂದು ಗುಲಾಂ ನಬಿ ಅಜಾದ್ ವಾಗ್ದಾಳಿ ನಡೆಸಿದ್ದಾರೆ.

ಕೆಟ್ಟ ಜಿಎಸ್ ಟಿ ತೆರಿಗೆಯಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳ ಮೇಲೆ ಪರಿಣಾಮ ಬೀರಿದ್ದು, ಸುಮಾರು 4.5 ಕೋಟಿ ಜನರಿಗೆ ಉದ್ಯೋಗವಿಲ್ಲದಂತಾಗಿದೆ ಎಂದು ಅವರು ಟೀಕಿಸಿದ್ದಾರೆ
SCROLL FOR NEXT