ದೇಶ

ಲೋಕಸಭಾ ಚುನಾವಣೆ ವೇಳೆಯಲ್ಲಿ ಸುಮಾರು 3,500 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್ ವಶ

Nagaraja AB

ನವದೆಹಲಿ: ಹದಿನೇಳನೆ ಲೋಕಸಭೆಗೆ ಚುನಾವಣೆ ಘೋಷಣೆಯಾದ ಮಾರ್ಚ್ 10ರಿಂದ ಈವರೆಗೂ ಸುಮಾರು 3449.12 ಕೋಟಿ ಮೊತ್ತದ ನಗದು, ಮದ್ಯ ಹಾಗೂ ಡ್ರಗ್ಸ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಳೆದ ಲೋಕಸಭಾ ಚುನಾವಣೆಗೆ  ಹೋಲಿಸಿದರೆ ಇದು ಮೂರು ಪಟ್ಟು ಹೆಚ್ಚಾಗಿದೆ.  2014ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಒಟ್ಟಾರೇ 1206 ಕೋಟಿ ಮೊತ್ತದ ವಸ್ತುಗಳನ್ನು  ವಶಪಡಿಸಿಕೊಳ್ಳಲಾಗಿತ್ತು ಎಂದು  ಚುನಾವಣಾ ವೆಚ್ಚದ ಮಹಾನಿರ್ದೇಶಕ ದಿಲೀಪ್ ಶರ್ಮಾ ಹೇಳಿದ್ದಾರೆ.

ಮೇ 10 ಮತ್ತು ಮೇ 19ರ ನಡುವಿನ ಅವಧಿಯಲ್ಲಿ 839. 03 ಕೋಟಿ ನಗದು,  294.41 ಕೋಟಿ ಮೊತ್ತದ ಮದ್ಯ , 1270.37 ಕೋಟಿ ಮೊತ್ತದ ಡ್ರಗ್ಸ್  , 986.76 ಕೋಟಿ ಮೊತ್ತದ ಚಿನ್ನಾಭರಣ, ಹಾಗೂ 58.56 ಕೋಟಿ ಮೊತ್ತದ ಸೀರೆ, ವಾಚ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

SCROLL FOR NEXT