ದೇಶ

ರಸ್ತೆ ಬದಿ ಗೋಡೌನ್ ನಲ್ಲಿ ಇವಿಎಂ ಶೇಖರಣೆ ವಿಡಿಯೋ ವೈರಲ್; ಚು. ಆಯೋಗ ಹೇಳಿದ್ದೇನು?

Srinivasamurthy VN
ಲಖನೌ: ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿರುವಂತೆಯೇ ಮತಯಂತ್ರಗಳನ್ನು ರಸ್ತೆಬದಿ ಗೋಡೌನ್ ಗೆ ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಮತಯಂತ್ರಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮತಯಂತ್ರಗಳನ್ನು ಖಾಸಗಿ ವಾಹನಗಳಲ್ಲಿ ಸಾಗಿಸುತ್ತಿರಿವ ವಿಡಿಯೋ ವೈರಲ್ ಆಗಿದೆ. ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ಚತಪಡಿಸುತ್ತಿದ್ದಾರೆ.
ಪತ್ರಿಕೆಯೊಂದು ವರದಿ ಮಾಡಿರುವಂತೆ ಚಂದೌಲಿ ಲೋಕಸಭಾ ಕ್ಷೇತ್ರದಲ್ಲಿ ಕೋಣೆಯೊಂದರೊಳಗೆ ಇವಿಎಂ ಸಂಗ್ರಹಿಸುತ್ತಿರುವ ದೃಶ್ಯವನ್ನು ಮೊಬೈಲ್ ಫೋನ್‌ ನಲ್ಲಿ ಶೂಟ್ ಮಾಡಿ ಹರಿಬಿಡಲಾಗಿತ್ತು. ಚಂದೌಲಿ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯ ಬೆಂಬಲಿಗರು ಈ ವಿಡಿಯೊ ಶೂಟ್ ಮಾಡಿದ್ದಾರೆ ಎನ್ನಲಾಗಿದೆ.. ಮತದಾನ ಮುಗಿದ ನಂತರ ಈ ಇವಿಎಂನ್ನು ಇಲ್ಲಿ ಯಾಕೆ  ಸಂಗ್ರಹಿಸಿಟ್ಟಿದ್ದಾರೆ ಎಂದು ಕೇಳುತ್ತಿರುವ ದನಿ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಅವು ರಿಸರ್ವ್ ಮತಯಂತ್ರಗಳು; ಚು. ಆಯೋಗದ  ಸ್ಪಷ್ಟನೆ
ಈ ವಿಡಿಯೋ ವೈರಲ್ ಆಗುತ್ತಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ ಅಲ್ಲಿ ವಿಡಿಯೋದಲ್ಲಿ ತೋರಿಸಲಾಗುತ್ತಿರುವ ಮತಯಂತ್ರಗಳು ರಿಸರ್ವ್ ಅಥವಾ ಹೆಚ್ಚುವರಿ ಮತಯಂತ್ರಗಳು. ಮತದಾನವಾದ ಮತಯಂತ್ರಗಳು ಸ್ಟ್ರಾಂಗ್ ರೂಂ ನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಡಿಯಲ್ಲಿ ಭಾರ ಭದ್ರತೆಯೊಂದಿಗೆ ಸುರಕ್ಷಿತವಾಗಿವೆ. ಈ ಬಗ್ಗೆ ಆತಂಕ ಬೇಡ ಎಂದು ಟ್ವೀಟ್ ಮಾಡಿದೆ. 
SCROLL FOR NEXT