ದೇಶ

ಚುನಾವಣಾ ಅಕ್ರಮದಲ್ಲಿ ಸುಪ್ರೀಂ ಕೋರ್ಟ್ ಕೂಡ ಭಾಗಿಯೇ?: ಕಾಂಗ್ರೆಸ್ ನಾಯಕ ಗಂಭೀರ ಆರೋಪ

Raghavendra Adiga
ನವದೆಹಲಿ: "ಎಲ್ಲಾ ವಿವಿಪ್ಯಾಟ್ ಗಳನ್ನೂ ಎಣಿಕೆ ಮಾಡಲು ಸುಪ್ರೀಂ ಕೋರ್ಟ್ ಏಕೆ ಒಪ್ಪಿಕೊಳ್ಳುವುದಿಲ್ಲ? ಹಾಗಾದರೆ ಸರ್ವೋಚ್ಚ ನ್ಯಾಯಾಲಯ ಸಹ ಚುನಾವಣಾ ಅಕ್ರಮಗಳ ಭಾಗವೆ? " ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಲೋಕಸಭೆ ಚುನಾವಣೆಯ ಮತಎಣಿಕೆ ಗುರುವಾರ (ಮೇ 23)ರಂದು ನಡೆಯಲಿದ್ದು ಮತಗಟ್ಟೆ ಸಮೀಕ್ಷೆಗಳು ಹೊರಬಂದ ನಂತರ ಬಹುತೇಕ ವಿಪಕ್ಷಗಳು ಇವಿಎಂ ಬಗೆಗೆ ಅನುಮಾನ ವ್ಯಕ್ತಪಡಿಸಿದೆ. ಇದೀಗ ಕಾಂಗ್ರೆಸ್ ನಾಯಕ ಉದಿತ್ ರಾಜ್ ಇದಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ. ಆದರೆ ಉದಿತ್ ತಾವು ಸುಪ್ರೀಂ ಕೋರ್ಟ್ ಕುರಿತಂತೆ ಸಂದೇಹ ವ್ಯಕ್ತಪಡಿಸಿರುವುದು ಭಾರೀ ಪ್ರಮಾದಕ್ಕೆ ಎಡೆ ಮಾಡಿದೆ.
ಉದಿತ್ ತಾವು ಟ್ವೀಟ್ ಮೂಲಕ ಸುಪ್ರೀಂ ಕೋರ್ಟ್ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದೆಯೆ ಎಂಬ ಪ್ರಶ್ನೆ ಹಾಕಿದ್ದು ತಮ್ಮ ಟ್ವೀಟ್ ನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯ ಕಾರ್ಯದರ್ಶಿ ಪ್ರಿಯಾಂಕಾ ಅವರಿಗೆ ಸಹ ಟ್ಯಾಗ್ ಮಾಡಿದ್ದಾರೆ.
ಮಂಗಳವಾರ ಸುಪ್ರೀಂ ಕೋರ್ಟ್ ಎಲೆಕ್ಟ್ರಾನಿಕ್ ಮತಯಂತ್ರದ ಮತ ಎಣಿಕೆಯೊಂದಿಗೆ ವಿವಿಪ್ಯಾಟ್ ನ 100% ಹೊಂದಾಣಿಕೆ ಪರಿಶೀಲಿಸಬೇಕೆನ್ನುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ಈ ಹಿಂದೆ ಮೇ ಮೇ 7ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ 21 ವಿರೋಧ ಪಕ್ಷದ ನಾಯಕರು ಸಲ್ಲಿಸಿದ ವಿವಿಪ್ಯಾಟ್ ಸ್ಲಿಪ್ ಗಳ 50 ಶೇಕಡಾ ತಾಳೆಯನ್ನು ಪರಿಶೀಲಿಸಬೇಕ್ಂಬ ಮನವಿಯನ್ನು ಜೆಐ ನೇತೃತ್ವದ ಮೂರು ನ್ಯಾಯಾಧೀಶರ ಪೀಠವು ತಳ್ಳಿ ಹಾಕಿತ್ತು.  ಇವಿಎಂಗಳೊಂದಿಗಿನ  2% ವಿವಿಪ್ಯಾಟ್ ಸ್ಲಿಪ್ ಗಳ ತಾಳೆಯು ಅಸಮರ್ಪಕವಾಗಿದೆ. ಇದು ನಾಗರಿಕರ ವಿಶ್ವಾಸವನ್ನು ಪ್ರತಿಬಿಂಬಿಸಲಾರದು ಎಂದು ಪ್ರತಿಪಕ್ಷಗಳು ಹೇಳಿದ್ದವು.
SCROLL FOR NEXT