ಕರ್ನಾಟಕ

ಸುಮಲತಾ ನಮ್ಮ ಪಕ್ಷದ ಚಿಹ್ನೆ ಬಳಸುತ್ತಿದ್ದಾರೆ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Lingaraj Badiger
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ನಮ್ಮ ಪಕ್ಷದ ಚಿಹ್ನೆ ಬಳಸುತ್ತಿದ್ದಾರೆ ಎಂದು ಆರೋಪಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಸುಮಲತಾ ಅವರ ಬೆಂಬಲಿಗರು ನಮ್ಮ ಪಕ್ಷದ ಬಾವುಟ ಹಿಡಿದು ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದು, ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿ ಜತೆ ನಮ್ಮ ಪಕ್ಷದ ಚಿಹ್ನೆ ಯಾವುದೇ ಕಾರಣಕ್ಕೂ ಕಾಣಿಸಬಾರದು. ನಮ್ಮ ಪಕ್ಷದ ಬಾವುಟ ಹಿಡಿದು ಸುಮಲತಾ ಪರ ಕೆಲಸ ಮಾಡುವವರು ಪಕ್ಷ ಬಿಟ್ಟು ಹೋಗಲಿ. ಒಂದು ವೇಳೆ ಹೋಗದಿದ್ದರರೆ ನಾವೇ ಅವರ ವಿರುದ್ದ್ಧ ಶಿಸ್ತಿನ ಕ್ರಮ ತೆಗದುಕೊಳ್ಳುತ್ತೇವೆ ದಿನೇಶ್​ ಗುಂಡೂರಾವ್​ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಡ್ಯದ ಜಿಲ್ಲಾ ಮುಖಂಡರ ಜೊತೆ ನಿನ್ನೆ ರಾತ್ರಿ ಸಭೆ ನಡೆಸಲಾಗಿದೆ. ಹಾಸನ, ಮಂಡ್ಯ, ಮೈಸೂರು ಸೇರಿದಂತೆ ಎಲ್ಲಾ ಕಡೆ ದೇವೇಗೌಡರು, ಸಿದ್ದರಾಮಯ್ಯ ಒಟ್ಟಾಗಿ ಪ್ರಚಾರ ಮಾಡುತ್ತಾರೆ. ಆ ಸಂದರ್ಭದಲ್ಲಿ ಎಲ್ಲರೂ ಇರಬೇಕು ಎಂದು ಹೇಳಿದ್ದೇವೆ. ಮುಂಚೆ ಅವರೆಲ್ಲಾ ಒಂದೇ ಪಕ್ಷದಲ್ಲಿ ಇದ್ದವರು. ಕೆಲವೊಂದು ಸಮಸ್ಯೆ ಇದ್ರೆ ಬಗೆಹರಿಸುತ್ತೇವೆ. ನಮ್ಮ ಪಕ್ಷದ ಚಿಹ್ನೆ ಪಕ್ಷೇತರ ಅಭ್ಯರ್ಥಿ ಜೊತೆ ಕಾಣಿಸಿಕೊಳ್ಳಬಾರದು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ ಎಂದರು.
SCROLL FOR NEXT