ಬಿ.ಎಸ್.ಯಡಿಯೂರಪ್ಪ 
ಕರ್ನಾಟಕ

ರಾಜ್ಯದಲ್ಲಿ 22, ದೇಶದಲ್ಲಿ ಬಿಜೆಪಿಗೆ 300 ಸೀಟುಗಳಲ್ಲಿ ಜಯ, ಮಂಡ್ಯದಲ್ಲಿ ಸುಮಲತಾ ಗೆಲವು ಶತಃಸಿದ್ಧ: ಬಿಎಸ್ ವೈ

ಸೊಕ್ಕಿನ ಮಾತುಗಳನ್ನು ಆಡುವ ಮೂಲಕ ಸುಮಲತಾ ಅವರನ್ನು ಜೆಡಿಎಸ್ ನಾಯಕರು ಅಪಮಾನ ಮಾಡುತ್ತಿದ್ದಾರೆ ಇದಕ್ಕೆಲ್ಲಾ ಏಪ್ರಿಲ್ 18ರಂದು ಉತ್ತರ ಸಿಗಲಿದೆ, ..

ಕಲಬುರಗಿ: ಸೊಕ್ಕಿನ ಮಾತುಗಳನ್ನು ಆಡುವ ಮೂಲಕ ಸುಮಲತಾ ಅವರನ್ನು  ಜೆಡಿಎಸ್ ನಾಯಕರು ಅಪಮಾನ ಮಾಡುತ್ತಿದ್ದಾರೆ ಇದಕ್ಕೆಲ್ಲಾ ಏಪ್ರಿಲ್ 18ರಂದು ಉತ್ತರ ಸಿಗಲಿದೆ, ಸುಮಲತಾ ಅಂಬರೀಷ್ ಅವರ ಗೆಲುವು ಶತಃಸಿದ್ದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್,ಯಡಿಯೂರಪ್ಪ ಹೇಳಿದ್ದಾರೆ.
ಕಲಬುರಗಿಯ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ 22 ಹಾಗೂ ಒಟ್ಟಾರೆ ಇಡೀ ದೇಶದಲ್ಲಿ 300 ಸೀಟುಗಳನ್ನು ಗೆಲ್ಲಲಿದೆ ಹಾಗೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ಪಡಿಸಿದ್ದಾರೆ.
ಸುಮಲತಾ ಅವರ ಕುರಿತು ಜಾತಿ ರಾಜಕಾರಣವನ್ನು ಜೆಡಿಎಸ್‌ನವರು ಮಾಡುತ್ತಿದ್ದಾರೆ. ಅಲ್ಲಿನ ಎಲ್ಲರೂ ಸಹ ಹಗುರವಾಗಿ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ಜನತೆ ಇದೀಗ ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ, ಮಂಡ್ಯದಲ್ಲಿ 100ಕ್ಕೆ 100ರಷ್ಟು ಸುಮಲತಾ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಯಡಿಯೂರಪ್ಪ ಹೇಳಿದರು. 
ಕಲಬುರಗಿಯ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಗೆದ್ದೇ ಗೆಲ್ಲುತ್ತಾರೆ ಎಂದ ಯಡಿಯೂರಪ್ಪ ಅವರು, ಜಾಧವ್ ಅವರನ್ನು ಪಕ್ಷದ ಹೈ ಕಮಾಂಡ್ ಪಕ್ಷಕ್ಕೆ ಬರಮಾಡಿಕೊಂಡಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!