ಧ್ರುವನಾರಾಯಣ ಮತ್ತು ಶ್ರೀನಿವಾಸ್ ಪ್ರಸಾದ್
ಚಾಮರಾಜನಗರ: ಚಾಮರಾಜನಗರ ಲೋಕಸಭಾ ಶ್ರೇತ್ರ ಕಾಂಗ್ರೆಸ್ ಭದ್ರಕೋಟೆ ಎಂದೇ ಪರಿಗಣಿತವಾಗಿದೆ, ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್ ಗೆ ಪ್ರತಿಷ್ಠೆ ವಿಷಯವಾಗಿದೆ, ಆದರೆ ಸ್ಥಾನಕಳೆದುಕೊಳ್ಳಲು ಬಿಜೆಪಿಗೂ ಇಷ್ಟವಿಲ್ಲ, ಹೀಗಾಗಿ ತನ್ನ ಖಾತೆ ತೆರೆಯಲು ಬಿಜೆಪಿ ಸಿದ್ದವಿದೆ.
ಬಿಎಸ್ ಪಿ ಕೂಡ ಖಾತೆ ತೆರೆಯಲು ತನ್ನ ಅಭ್ಯರ್ಥಿಯನ್ನು ಮುಂದಾಗಿದೆ. ಕಾಂಗ್ರೆಸ್ ಆರ್. ಧ್ರುವನಾರಾಯಣ ಮತ್ತು ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಎರಡು ಬಾರಿ ಸಂಸದರಾಗಿರುವ ಧ್ರುವನಾರಾಯಣ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದು, ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದಾರೆ, ಮಾಜಿ ಸಚಿವ ದಲಿತ ಮುಖಂಡ ವಿ. ಶ್ರೀನಿವಾಸ್ ಪ್ರಸಾದ್ ಧ್ರುವನಾರಾಯಣಗೆ ಬಿಗ್ ಫೈಟ್ ನೀಡಲು ಮುಂದಾಗಿದ್ದಾರೆ,
1998 ರಲ್ಲಿ ಜೆಡಿಎಸ್ ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಗೆದ್ದು ಎಲ್ಲರಲ್ಲೂ ಅತ್ತರಿ ಮೂಡಿಸಿದ್ದರು, ಆ ವೇಳೆ ಸಂಪುಟದಲ್ಲಿ ಸ್ಥಾನ ಪಡೆದಿದ್ದರು.ಅದಾದ ನಂತರ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು, ಅದಾದ ನಂತರ ರಾಜಕೀಯ ನಿವೃತ್ತಿ ಪಡೆದು, ಚುನಾವಣೆಯಿಂದ ದೂರ ಉಳಿದಿದ್ದರು, ಆದರೆ ಬಿಜೆಪಿ ಒತ್ತಾಯದಿಂದ ಮತ್ತೆ ಚುನಾವಣೆ ಸ್ಪರ್ಧಿಸಿದ್ದಾರೆ.
ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ 3 ಲಕ್ಷ ಮಂದಿ ಲಿಂಗಾಯತ ಸಮುದಾಯದ ಮತಗಳಿವೆ, ಎರಡನೇ ಸ್ಥಾನದಲ್ಲಿ ನಾಯಕ್, ಉಪ್ಪಾರ ಹಾಗೂ ಕುರುಬರು ಮತ್ತು ಅಲ್ಪ ಸಂಖ್ಯಾತ ಮತದಾರರಿದ್ದಾರೆ,.ಲಿಂಗಾಯತ ಮತ್ತು ನಾಯಕ್ ಮತಗಳನ್ನು ಸೆಳೆಯಲು ಶ್ರೀನಿವಾಸ್ ಪ್ರಸಾದ್ ಸಮರ್ಥರಿದ್ದಾರೆ, ದಲಿತ ಮತಗಳು ಕೂಡ ಶ್ರೀನಿವಾಸ್ ಪ್ರಸಾದ್ ಗೆ ಬರಲಿವೆ, ಜೊತೆಗೆ ಪಾಕಿಸ್ತಾನ ವಿರುದ್ಧ ಏರ್ ಸ್ಟ್ರೈಕ್ ನಡೆಸಿದ ಮೇಲೆ ಈ ಭಾಗದಲ್ಲಿ ನರೇಂದ್ರ ಮೋದಿ ಹೆಚ್ಚು ಜನಪ್ರಿಯರಾಗಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮಾಡುವಲ್ಲಿ ಬಿಜೆಪಿ ನಿರ್ಲಕ್ಷ್ಯ ತೋರಿತ್ತು, ಆದರೆ ಪ್ರಸಾದ್ ಎಲ್ಲೆಡೆಯೂ ಕಷ್ಟಪಟ್ಟು ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ, ಆದರೆ ಅವರ ವಿರೋಧಿ ಧ್ರುವನಾರಾಯಣ ಕಳೆದ ನಾಲ್ಕು ತಿಂಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ,.
ತಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಧ್ರುವನಾರಾಯಣ ಮತಯಾಚನೆ ಮಾಡುತ್ತಿದ್ದಾರೆ, ಜೊತೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ, ಕಾಂಗ್ರೆಸ್ 4 ಶಾಸಕರನ್ನು ಹೊಂದಿದೆ, ಜೊತೆಗೆ ಮೂವರು ಸಚಿವರಿದ್ದಾರೆ, ಜೊತೆಗೆ ಸಿದ್ದರಾಮಯ್ಯ ಬೆಂಬಲ ಕೂಡ ಇದಗೆ,2018ರ ವಿಧಾನಭೆ ಚುನಾವಣೆಯಲ್ಲಿ ಬಿಜೆಪಿ 2 ಸೀಟು ಗೆದ್ದಿತ್ತು,
ಶ್ರೀನಿವಾಸ್ ಪ್ರಸಾದ್ ಮತ್ತು ಧ್ರುವನಾರಾಯಣ ಇಬ್ಬರು ಉತ್ತಮವಾಗಿಯೇ ತಮ್ಮ ಮತಯಾಚನೆ ಮಾಡುತ್ತಿದ್ದಾರೆ, ಜೆಡಿಎಸ್ ಬೆಂಬಲದೊಂದಿಗೆ ಬುಡಕಟ್ಟು ಜನಾಂಗದ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ, ಕಳೆದ ವರ್ಷ ಕೊಳ್ಳೇಗಾಲದಲ್ಲಿ ಬಿಎಸ್ ಪಿಯಿಂದ ಶಾಸಕರೊಬ್ಬರು ಆಯ್ಕೆಯಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos