ಕರ್ನಾಟಕ

ತುಮಕೂರಿನ ಕುರುಬ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಖಾಲಿ ಕುರ್ಚಿಗಳ ಸ್ವಾಗತ!

Sumana Upadhyaya
ತುಮಕೂರು: ಇಲ್ಲಿ ನಡೆದ ಕುರುಬ ಸಮುದಾಯದ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ತೀವ್ರ ಮುಜುಗರವಾಗುವ ಸನ್ನಿವೇಶ ನಿನ್ನೆ ಎದುರಾಯಿತು. ಸಮ್ಮೇಳನ ನಡೆದ ಸ್ಥಳದಲ್ಲಿ ಸುಮಾರು 5 ಸಾವಿರ ಜನರು ಸೇರುವ ನಿರೀಕ್ಷೆಯಿದ್ದಿತು.
ಆದರೆ ಅಲ್ಲಿ ಸೇರಿದ್ದು ಕೇವಲ ಸುಮಾರು ಸಾವಿರ ಮಂದಿ ಮಾತ್ರ, ಕಾರ್ಯಕರ್ತರು ಹಾಕಿದ್ದ ಕುರ್ಚಿಗಳೆಲ್ಲವೂ ಖಾಲಿ ಖಾಲಿಯಾಗಿದ್ದವು. ಮಾಜಿ ಸಿಎಂ ಸಿದ್ದರಾಮಯ್ಯನವರಿಂದಾಗಿ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮುದಾಯದವರು ಸೇರಲಿಲ್ಲ ಎನ್ನಲಾಗಿದೆ.
ಹಿಂದುಳಿದ ವರ್ಗಗಳ ಮುಖಂಡ ಕೆಎನ್ ರಾಜಣ್ಣ, ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯವಾಗಿ ಸಿದ್ದರಾಮಯ್ಯನವರನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದು ಸೇರಿದಂತೆ ಹಲವು ಬಾರಿ ತುಳಿದಿದ್ದರಿಂದ ನಾವು ಈ ಬಾರಿ ದೇವೇಗೌಡರನ್ನು ತುಮಕೂರಿನಲ್ಲಿ ಸೋಲಿಸಬೇಕೆಂದು ನಿರ್ಣಯ ಕೈಗೊಂಡಿದ್ದೇವೆ. ನಮ್ಮ ಸಮುದಾಯದವರನ್ನು ಓಲೈಸುವ ಸಲುವಾಗಿ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯ ಶಂಕರ್ ಅವರನ್ನು ಗೆಲ್ಲಿಸಬೇಕೆಂದು ಬೆಂಬಲ ಸೂಚಿಸಿದ್ದಾರೆ. ವಿಜಯ್ ಶಂಕರ್ ಅವರು ಕುರುಬ ನಾಯಕರಾಗಿದ್ದು ಸಿದ್ದರಾಮಯ್ಯನವರ ಬೆಂಬಲಿತ ಅಭ್ಯರ್ಥಿ. ಆದರೆ ವಾಸ್ತವವಾಗಿ ದೇವೇಗೌಡರಿಗೆ ಕುರುಬ ಜನಾಂಗದ ಮೇಲೆ ಪ್ರೀತಿ, ಅಭಿಮಾನ ಇಲ್ಲ ಎಂದು ಆರೋಪಿಸಿದರು.
SCROLL FOR NEXT